ತಮಿಳುನಾಡು ಮತದಾರರಿಗೆ ಬಂಪರ್ ಕೊಡುಗೆಗಳು: ಲ್ಯಾಪ್‌ಟಾಪ್, ಚಿನ್ನ, ಮೊಬೈಲ್

ಶುಕ್ರವಾರ, 6 ಮೇ 2016 (16:14 IST)
ವಿಧಾನಸಭೆ ಚುನಾವಣೆಯ ಬಿಸಿ ತಮಿಳುನಾಡಿಗೆ ತಟ್ಟಿದ್ದು, ಮತದಾರರ ಓಲೈಕೆಗೆ ಡಿಎಂಕೆ, ಎಐಎಡಿಎಂಕೆ ಮತ್ತು ಇತರೆ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಹಂಚುವ ಮೂಲಕ ಪೈಪೋಟಿಗೆ ಇಳಿದಿವೆ.  ಉಚಿತ ಫ್ರೀಬಿಗಳನ್ನು ನೀಡುವುದು ಚುನಾವಣೆ ವೇಳೆಯಲ್ಲಿ ಅಂತರ್ಗತ ಸಂಪ್ರದಾಯವಾಗಿದೆ. ತಮಿಳುನಾಡು ಕೂಡ ಅದರಿಂದ ಹೊರತಾಗಿಲ್ಲ.
 
ಪಕ್ಷಗಳು ನಗದು ಅಥವಾ ಬೇರಾವುದೇ ರೀತಿಯಲ್ಲಿ ಕೊಡುಗೆಗಳನ್ನು ನೀಡಿ ತಮ್ಮ ಪರವಾಗಿ ಮತ ಹಾಕಿಸಿಕೊಳ್ಳುವುದನ್ನು ಖಾತರಿ ಮಾಡಿಕೊಂಡಿವೆ. 
ವಿವಿಧ ಪಕ್ಷಗಳು ನೀಡುವ ಕೊಡುಗೆಗಳ ಭರವಸೆಗಳು ಕೆಳಗಿನಂತಿವೆ.
 
ಎಐಎಡಿಎಂಕೆ
ಮುಖ್ಯಮಂತ್ರಿ ಜಯಲಲಿತಾ ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಉಚಿತ ಮೊಬೈಲ್ ಫೋನ್‌ಗಳನ್ನು ಮತ್ತು ಮಹಿಳೆಯರಿಗೆ ಸ್ಕೂಟರ್ ಖರೀದಿಗೆ ಶೇ. 50ರಷ್ಟು ಸಬ್ಸಿಡಿ ನೀಡುವುದಾಗಿ ಹೇಳಿoz.
100 ಯೂನಿಟ್ ವಿದ್ಯುಚ್ಛಕ್ತಿ ಕೂಡ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ. ಸರ್ಕಾರಿ ಸ್ವಾಮ್ಯದ ಕೇಬಲ್ ಟಿವಿ ಸೇವೆಯ ಚಂದಾದಾರರಿಗೆ ಉಚಿತ ಸೆಟ್ ಅಪ್ ಬಾಕ್ಸ್ ನೀಡುವುದಾಗಿ ಪ್ರಕಟಿಸಿದ್ದಾರೆ.
 
ಡಿಎಂಕೆ ಬಡಜನರಿಗೆ ಸ್ಮಾರ್ಟ್‌‍ಫೋನ್, ಉಚಿತ 3ಜಿ/ಸೇವೆ ಜತೆಗೆ ಉಚಿತ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಭರವಸೆ ನೀಡಿದೆ.  20 ಕೆಜಿ ಉಚಿತ ಅಕ್ಕಿಯನ್ನು ಪ್ರತಿ ತಿಂಗಳು ಹಂಚುವ ಭರವಸೆಯನ್ನು ಪಕ್ಷ ನೀಡಿದೆ. 
 
ಬಿಜೆಪಿ ಜಲ್ಲಿಕಟ್ಟು ಕ್ರೀಡೆಯನ್ನು ಮುಂದಿನ ವರ್ಷದಿಂದ ವಾಪಸು ತರುವ ಭರವಸೆ ನೀಡಿದೆ. ಕಡುಬಡ ವರ್ಗದ ಮಹಿಳೆಯರ ವಿವಾಹಕ್ಕೆ 8 ಗ್ರಾಂ ಚಿನ್ನವನ್ನು ಉಚಿತವಾಗಿ ನೀಡುವ ಭರವಸೆಯನ್ನು ನೀಡಿದೆ. 

ವೆಬ್ದುನಿಯಾವನ್ನು ಓದಿ