ಭಯೋತ್ಪಾದಕ ಯಾಸಿನ್ ಭಟ್ಕಳ್ ಸಹಚರ ಅಬ್ದುಲ್ ವಾಹೀದ್ ಬಂಧನ

ಶನಿವಾರ, 21 ಮೇ 2016 (12:48 IST)
ಇಂಡಿಯನ್ ಮುಜಾಹಿದಿನ್ ಉಗ್ರ ಯಾಸಿನ್ ಭಟ್ಕಳ್ ಸಹಚರ ಅಬ್ದುಲ್ ವಾಹಿದ್ ಸಿದ್ದಬಪ್ಪಾ ಎನ್ನುವ ಶಂಕಿತ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣ ಹೊಂದಿಸುವ ಹೊಣೆಯನ್ನು ಹೊತ್ತಿದ್ದ ಅಬ್ದುಲ್‌ನನ್ನು ದುಬೈ‌ನಿಂದ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
  
ಭಟ್ಕಳ್ ಮೂಲದ 32 ವರ್ಷ ವಯಸ್ಸಿನ ಸಿದ್ದಿಬಪ್ಪಾ ಎನ್ನುವ ಉಗ್ರ ಖಾನ್ ಎನ್ನುವ ಕೋಡ್ ಬಳಸುತ್ತಿದ್ದ ಎನ್ನಲಾಗಿದೆ. ಜೈಲಿನಲ್ಲಿ ಬಂಧಿತನಾಗಿರುವ ಯಾಸಿನ್ ಭಟ್ಕಳ್ ಸಹಂದರ ಸಂಬಂಧಿ ಎಂದು ಗುರುತಿಸಲಾಗಿದೆ. ಮುಂಬೈ ಸರಣಿ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ದೆಹಲಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಗ್ರ ಸಿದ್ದಿಬಪ್ಪಾ ವಿರುದ್ಧ ಇಂಟರ್‌ಪೋಲ್ ನೋಟಿಸ್ ಜಾರಿಗೊಳಿಸಲಾಗಿತ್ತು. 
 
ಗಲ್ಫ್ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡು ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ನಡೆಸುತ್ತಿರುವವರಿಗೆ ಭಾರತದೊಂದಿಗೆ ಯುಎಇ ಸರಕಾರದ ಸಹಕಾರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.  
 
ಉಗ್ರ ಸಿದ್ದಿಬಪ್ಪಾನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಏಳು ದಿನಗಳ ಅವಧಿಗೆ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. 


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ