ನವದೆಹಲಿ : ಅನರ್ಹ ಶಾಸಕರ ಅರ್ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ತೀರ್ಪು ಬರುವ ನಿರೀಕ್ಷೆಯಲ್ಲಿದ್ದ ಅನರ್ಹರಿಗೆ ನಿರಾಸೆಯಾಗಿದೆ.
ಹೌದು. ಇಂದು ತೀರ್ಪು ಪ್ರಕಟವಾಗಲಿದ್ದು, ನಂ11ರೊಳಗೆ ಮಂತ್ರಿಯಾಗುವ ಆಸೆಯಲ್ಲಿ ಅನರ್ಹರಿದ್ದರು. ಆದರೆ ಇಂದಿನ ಸುಪ್ರೀಂ ಕೋರ್ಟ್ ಪ್ರಕರಣಗಳ ಪಟ್ಟಿಯಲ್ಲಿ ಅನರ್ಹರ ಪ್ರಕರಣ ಇಲ್ಲವಾದ್ದರಿಂದ ತೀರ್ಪನ್ನು ಕಾಯ್ದಿರಿಸಲಾಗಿದೆ ಎನ್ನಲಾಗಿದೆ.
ಆದ್ದರಿಂದ ಸೋಮವಾರದಿಂದ ಉಪಚುನಾವಣೆ ನೀತಿಸಂಹಿತೆ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಉಪಚುನಾವಣೆಯ ಮುಂದೂಡಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಅನರ್ಹರ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ನಿರ್ದೇಶನ ನೀಡುವುದಿಲ್ಲ ಎಂದು ಹೇಳುವುದರ ಮೂಲಕ ಅನರ್ಹರ ಆಸೆಗೆ ತಣ್ಣೀರು ಎರಚಿದೆ.