ಪ್ರಧಾನಮಂತ್ರಿ ನರೇಂದ್ರ ನಿರಂತರ ವಿದೇಶ ಪ್ರವಾಸಗಳಿಗೆ ತೆರಳುತ್ತಿರುವುದು, ಎನ್‌ಡಿಎ ಸರಕಾರದ ಎರಡು ವರ್ಷಗಳ ಅವಧಿ ಮುಕ್ತಾಯಗೊಳಿಸಿದ ಸಂಭ್ರಮವನ್ನು ಆಚರಿಸುತ್ತಿರುವುದರ ವಿರುದ್ಧ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೀಕಾ ಪ್ರಹಾರ ನಡೆಸಿದ್ದಾರೆ.
ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಕಾರ್ಮಿಕ ಸಂಪನ್ಮೂಲ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮೌನವಾಗಿ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ವಿದೇಶ ಪ್ರವಾಸಗಳಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಮೋದಿ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದರು.
ಹಿಂದಿನ ಘಟನೆಗಳನ್ನು ಮೆಲಕು ಹಾಕಿದ ನಿತೀಶ್, ನಾನು ಲೋಕಸಭಾ ಸದಸ್ಯನಾಗಿದ್ದಾಗ ವಿದೇಶಕ್ಕೆ ಒಂದು ತಿಂಗಳ ಪ್ರವಾಸಕ್ಕಾಗಿ ತೆರಳುವ ಅವಕಾಶ ದೊರೆತಿತ್ತು. ಆದರೆ, ನಾನು ಗೌರವಯುವಾಗಿಯೇ ನಿರಾಕರಿಸಿದೆ ಎಂದು ಮೋದಿಗೆ ತಿರುಗೇಟು ನೀಡಿದರು.