ಬಿಹಾರ್ ಪ್ರವಾಹ: ಸಾವಿನ ಸಂಖ್ಯೆ 89ಕ್ಕೆ ಏರಿಕೆ

ಶನಿವಾರ, 6 ಆಗಸ್ಟ್ 2016 (07:54 IST)
ಪ್ರವಾಹ ಸಂಬಂಧಿ ಅವಘಡಗಳಿಂದ ಬಿಹಾರದಲ್ಲಿ ಮೃತಪಟ್ಟವರ ಸಂಖ್ಯೆ 89ಕ್ಕೆ ಏರಿದೆ. ಶುಕ್ರವಾರ 25 ಸಾವು ದಾಖಲಾಗಿದ್ದು,  14 ಜಿಲ್ಲೆಗಳ ಸುಮಾರು 33 ಲಕ್ಷ ಜನರು ಇದರಿಂದ ಬಾಧಿತರಾಗಿದ್ದಾರೆ.

ಪೂರ್ನಿಯಾ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 26 ಮಂದಿ ಮೃತಪಟ್ಟಿದ್ದು,  ಅರಾರಿಯಾದಲ್ಲಿ 21, ಕಥಿಹಾರ್‌ನಲ್ಲಿ 15, ಸುಪೌಲ್‌ನಲ್ಲಿ 8 ಹಾಗೂ ಕೃಷ್ಣಗಂಜ್‌ನಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.

ಮಧೇಪುರಾ, ಗೋಪಾಲಗಂಜ್‌ನಲ್ಲಿ ತಲಾ 4, ದರ್ಭಾಂಗಾದಲ್ಲಿ 3 ಮತ್ತು ಮುಜಪ್ಫರ್‌ಪುರ, ಸರಣ ಮತ್ತು ಸಹರ್ಸಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಮಹಾನಂದಾ, ಕನ್‌ಕಯಿ, ಪಾರ್ಮರ್, ಕೋಶಿ ಮತ್ತು ಇತರ ನದಿಗಳು ಪೂರ್ನಿಯಾ, ಅರಾರಿಯಾ,  ದರ್ಭಾಂಗಾ,  ಮಾಧೇಪುರಾ, ಕಥಿಹಾರ್, ಸಹರ್ಸಾ, ಸುಪೌಲ್, ಗೋಪಾಲ್‌ಗಂಜ್ ಪೂರ್ವ ಚಂಪಾರಣ್ಯ, ಪಶ್ಚಿಮ ಚಂಪಾರಣ್ಯ ಮತ್ತು ಮುಜಪ್ಪರ್‌ಪುರ್ ಜಿಲ್ಲೆಗಳ ಮುಳುಗಡೆಗೆ ಕಾರಣವಾಗಿವೆ.

ಇತ್ತೀಚಿನ ವರದಿಗಳ ಪ್ರಕಾರ ಭಾಗಲ್ಪುರದಲ್ಲಿ ಗಂಗಾ ನದಿ, ಸಿವಾನ್ ಜಿಲ್ಲೆಯಲ್ಲಿ ಘಾಗ್ರಾ ನದಿ, ಖಗಾರಿಯಾದ ಬುಧಿ ಗಂಡಕ್ ನದಿ ಹಾಗೂ ಕಥಿಹಾರ  ಮತ್ತು ಖಾಗರರಿಯಾ ಜಿಲ್ಲೆಗಳಲ್ಲಿ ಕೋಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

6.41 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ 1,490 ಬೋಟ್ ಬಳಸಲಾಗುತ್ತಿದೆ. 3.79 ಲಕ್ಷ ಜನರು ಕ್ಯಾಂಪ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ವೆಬ್ದುನಿಯಾವನ್ನು ಓದಿ