ಸಿಬಿಐ ದಾಳಿಯ ದಾಳಕ್ಕೆ ಉರುಳಿದ ಬಿಹಾರದ ಮಿತ್ರರು
ಸಿಬಿಐ ದಾಳಿ ನಡೆಸಿರುವುದರ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರದ ಕೈವಾಡವಿದೆ ಎಂದು ಲಾಲೂ ಆರೋಪಿಸಿದ್ದಾರೆ. ಇದೀಗ ಸಿಬಿಐ ದಾಳಿ ನಡೆದರೂ ಸುಮ್ಮನಿದ್ದ ಮಿತ್ರ ಪಕ್ಷ ಜೆಡಿಯು ಮೇಲೆ ಲಾಲೂ ಮುನಿಸಿಕೊಳ್ಳುವುದು ಸಹಜ. ಹಾಗಾಗಿ ಬಿಹಾರದಲ್ಲಿ ಮಹಾ ಮೈತ್ರಿಯೊಂದು ಮುರಿದು ಬೀಳುವ ಹಂತಕ್ಕೆ ಬಂದಿದೆ.