ಜೈ ಶ್ರೀರಾಮ್ ಹೇಳಿ ಫತ್ವಾ ಪಡೆದ ಬಿಹಾರ ಸಚಿವ
ಇಷ್ಟೆಲ್ಲಾ ರಗಳೆಗಳಾದ ಮೇಲೆ ಸಚಿವರು ಇದೀಗ ನಾನು ಜೈ ಶ್ರೀರಾಮ್ ಹೇಳಿರುವುದರಿಂದ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ನನಗೆ ಹೀಗೆ ಹೇಳಲು ಯಾರೂ ಬಲವಂತ ಮಾಡಿಲ್ಲ. ಯಾವುದೇ ಕೆಟ್ಟ ಉದ್ದೇಶದಿಂದ ನಾನು ಹೀಗೆ ಹೇಳಿಲ್ಲ. ಜೈ ಶ್ರೀರಾಮ್ ಎನ್ನುವುದರಿಂದ ಬಿಹಾರ ಅಭಿವೃದ್ಧಿಯಾಗುವುದಿದ್ದರೆ, ಹಾಗೆ ಹೇಳಲು ಹಿಂಜರಿಯುವುದಿಲ್ಲ. ನೋವಾಗಿದ್ದರೆ ಕ್ಷಮಿಸಿ ಎಂದು ವಿವಾದಗಳಿಗೆ ತೆರೆ ಎಳೆಯವ ಪ್ರಯತ್ನ ನಡೆಸಿದ್ದಾರೆ.