ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ: ಶಾಸಕನ ಬಂಧನ

ಶನಿವಾರ, 30 ಜುಲೈ 2016 (15:55 IST)
ಬಿಹಾರ್‌ನ ಕಟಿಹಾರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಸಿಪಿಐ(ಎಂಎಲ್) ಪಕ್ಷದ ಶಾಸಕ ಮೆಹಬೂಬ್ ಆಲಂನನ್ನು ಪೊಲೀಸರು ಬಂಧಿಸಿದ್ದಾರೆ.
 
ಅಲಹಾಬಾದ್‌ ಬ್ಯಾಂಕ್‌‌ನ ಗ್ವಾಲ್ಟೋಲಿ ಶಾಖೆಯ ವ್ಯವಸ್ಥಾಪಕ ರಾಜೇಶ್ ರಂಜನ್, ಶಾಸಕ ಆಲಂ ಕರ್ತವ್ಯನಿರ್ವಹಣೆಗೆ ಅಡ್ಡಿಯಾಗಿದ್ದಲ್ಲದೇ ಶಾಖೆಯನ್ನು ಬಲವಂತವಾಗಿ ಮುಚ್ಚಿಸುವ ಯತ್ನ ಮಾಡಿ ಅಸಭ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.   
 
ಗ್ವಾಲ್ಟೋಲಿ ಶಾಖೆಯಲ್ಲಿ ಶಾಸಕನ ವರ್ತನೆಯ ಬಗ್ಗೆ ರಂಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.  
 
ಮಾಧ್ಯಮದ ವರದಿಗಾರರು ಘಟನೆ ಕುರಿತಂತೆ ಶಾಸಕ ಆಲಂನನ್ನು ಪ್ರಶ್ನಿಸಿದಾಗ, ಬ್ಯಾಂಕ್‌ ಮ್ಯಾನೇಜರ್ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಅವರು ನನ್ನ ವಿರುದ್ಧ ಕೇಸ್ ದಾಖಲಿಸಿದ್ರೆ ನಾನು ಅವರ ವಿರುದ್ಧ ಕೇಸ್ ದಾಖಲಿಸುತ್ತೇನೆ. ಜನರ ಸಮಸ್ಯೆಗಳನ್ನು ತೆಗೆದುಕೊಂಡು ಬ್ಯಾಂಕ್‌ಗೆ ಹೋಗಿದ್ದೆ. ಆದರೆ, ಬ್ಯಾಂಕ್ ಮ್ಯಾನೇಜರ್ ತುಂಬಾ ಭ್ರಷ್ಟ ಅಧಿಕಾರಿ ಎಂದು ಕಿಡಿಕಾರಿದ್ದಾರೆ.
 
ಆದರೆ, ಬ್ಯಾಂಕ್‌ನ ಸಿಸಿಟಿವಿಯಲ್ಲಿ ಶಾಸಕ ಆಲಂ ಬ್ಯಾಂಕ್‌ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಘಟನೆಯನ್ನು ಖಚಿತಪಡಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ