"ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಅಗತ್ಯವಿದೆ. ಕವರ್ ಮೇಲೆ ಮಹಾತ್ಮ ಗಾಂಧಿ ಚಿತ್ರವನ್ನು ಹೊಂದರಲೇಬೇಕು ಎಂಬ ಯಾವುದೇ ನಿಯಮ ಇಲ್ಲ. 1996, 2002, 2005, 2011, 2012 ಮತ್ತು 2013 ಕೆವೈಐಸಿ ಪಂಚಾಂಗಗಳಲ್ಲಿ ಮಖಪುಟದಲ್ಲಿ ಗಾಂಧಿ ಚಿತ್ರ ಮುದ್ರಿತವಾಗಿರಲಿಲ್ಲ 'ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ಮೋದಿ ಮಹಾತ್ಮಾ ಗಾಂಧಿಯವರ ಸ್ಥಾನ ಪಡೆದಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಮಾವು, ಮೋದಿ ಅವರು ಪ್ರತಿ ವೇದಿಕೆಯಲ್ಲೂ ಗಾಂಧೀಜಿ ಚರಣಗಳಿಗೆ ವಂದಿಸುತ್ತಾರೆ. ನಾವು ಗಾಂಧಿ ಹೆಸರನ್ನು ರಾಜಕೀಯ ಕಾರಣಗಳಿಗೆ ಬಳಸಿಕೊಂಡಿಲ್ಲ. ಆದರೆ ಒಂದು ಕುಟುಂಬ ಅವರ ಹೆಸರನ್ನು ರಾಜಕಾರಣಕ್ಕೆ ಬಳಸಿಕೊಂಡಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.