ಪ್ರಧಾನಿ ಮೋದಿ ಎದುರುಗಡೆಯೇ ಸಚಿವೆ ಸೊಂಟಕ್ಕೆ ಕೈಹಾಕಿದ ಬಿಜೆಪಿ ಸಚಿವ

ಬುಧವಾರ, 13 ಫೆಬ್ರವರಿ 2019 (08:28 IST)
ನವದೆಹಲಿ : ಪ್ರಧಾನಿ ಮೋದಿ ಎದುರುಗಡೆಯೇ ಬಿಜೆಪಿ ಸಚಿವನೊಬ್ಬ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ತ್ರಿಪುರಾದಲ್ಲಿ ನಡೆದಿದೆ.


ತ್ರಿಪುರಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ಸಚಿವ ಮನೋಜ್ ಕಾಂತಿ ದೇಬ್ ಸಮಾಜ ಕಲ್ಯಾಣ ಇಲಾಖೆ ಸಚಿವೆ ಸಂತನಾ ಚಕ್ಮಾ ಅವರ ಸೊಂಟದ ಮೇಲೆ ಕೈ ಇಟ್ಟಿದ್ದಾರೆ. ಇದಕ್ಕೆ ಸಂಬಂಧಪಟ್ಠಂತೆ ವಿಡಿಯೋ ಹಾಗೂ ಫೋಟೋಸ್ ವೈರಲ್ ಆಗಿದೆ.


ಸಚಿವರ ಮಾಡಿದ ಇಂತಹ ನೀಚ ಕೆಲಸಕ್ಕೆ ವಿಪಕ್ಷಗಳು ಕಿಡಿಕಾರುತ್ತಿದ್ದು, 'ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ವೇದಿಕೆಯ ಮೇಲಿರುವಾಗಲೇ ದೇಬ್ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಅವರನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ