ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ಡಿವೋರ್ಸ್ ನೀಡಬೇಕು ಎಂದ ಬಿಜೆಪಿ ಶಾಸಕ

ಗುರುವಾರ, 28 ಮೇ 2020 (08:44 IST)
Normal 0 false false false EN-US X-NONE X-NONE

ನವದೆಹಲಿ : ಜಾತಿ ನಿಂದನೆ ಮಾಡಿದ್ದಕ್ಕೆ ನಟಿ ಅನುಷ್ಕಾ ಶರ್ಮಾಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಡಿವೋರ್ಸ್ ಕೊಡಬೇಕು ಎಂದು ಬಿಜೆಪಿ ಶಾಸಕರೊಬ್ಬರು ಸಲಹೆ ನೀಡಿದ್ದಾರೆ.
 


 

ನಟಿ ಅನುಷ್ಕಾ ಶರ್ಮಾ ‘ಪಾತಾಳ್ ಲೋಕ್ ‘ ನಲ್ಲಿ ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದು, ಇದರಲ್ಲಿ ಜಾತಿ ನಿಂದನೆ ಮತ್ತು ನೇಪಾಳಿ ಸಮುದಾಯವೊಂದನ್ನು ಅವಮಾನಿಸಿದ್ದಾರೆ. ಅಲ್ಲದೇ ನನ್ನ ಅನುಮತಿ ಇಲ್ಲದೇ ನನ್ನ ಫೋಟೋವನ್ನು ವೆಬ್ ಸೀರಿಸ್ ನಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಅನುಷ್ಕಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

 

ಅಲ್ಲದೇ ಅನುಷ್ಕಾ ಪತಿ ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವ ರಾಷ್ಟ್ರೀಯವಾದಿಯಾದ್ದರಿಂದ ಅವರು ಅನುಷ್ಕಾ ಶರ್ಮಾಗೆ ಡಿವೋರ್ಸ್ ನೀಡಬೇಕು ಎಂದು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ