ಇಫ್ತಾರ್ ಕೂಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ
ಮಂಗಳವಾರ, 12 ಜೂನ್ 2018 (15:34 IST)
ಹೈದರಾಬಾದ್ :ರಂಜಾನ್ ನಿಮಿತ್ತ ಏರ್ಪಡಿಸಲಾಗುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣ ಹೈದರಾಬಾದಿನ ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ಮೇಲೆ ದೂರು ದಾಖಲಿಸಲಾಗಿದೆ.
ಬಿಜೆಪಿ ಶಾಸಕ ರಾಜಾ ಸಿಂಗ್ ಅವರು,’ ಇಫ್ತಾರ್ ಕೂಟ ಏರ್ಪಡಿಸುವವರೆಲ್ಲರೂ ಮತದ ಭಿಕ್ಷೆ ಬೇಡುವವರು. ಅಂಥ ಕೂಟಗಳಿಗೆ ನಾನು ಎಂದಿಗೂ ತೆರಳುವುದಿಲ್ಲವೆಂದು ಹಾಗೂ ಟಿಎಸ್ ಆರ್ ಇಫ್ತಾರ್ ಕೂಟ ಆಯೋಜಿಸುವಲ್ಲಿ ನಿರತವಾಗಿದೆ. ಹಸಿರು ಪುಸ್ತಕ ದೇಶಾದ್ಯಂತ ಭಯೋತ್ಪದನೆ ಹರಡುತ್ತಿದ್ದು, ಅದನ್ನು ನಿಷೇಧಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಇದೀಗ ಫಲಕ್ನುಮಾ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ