ಬಿಜೆಪಿ ಸಂಸದನ ಹನಿಟ್ರ್ಯಾಪ್: ಹೈಪ್ರೊಫೈಲ್ ಮಹಿಳೆ ಬಂಧನ

ಮಂಗಳವಾರ, 2 ಮೇ 2017 (14:30 IST)
ಹನಿಟ್ರ್ಯಾಪ್ ಮಾಡಿ, 5 ಕೋಟಿ ರೂಪಾಯಿ ಸುಲಿಗೆಗೆ ಮುಂದಾಗಿದ್ದ ಆರೋಪದಡಿ ಗುಜರಾತ್ ಸಂಸದ ಕೆ.ಸಿ. ಪಟೇಲ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.
 
ಗಾಜಿಯಾಬಾದ್`ನ ನಿವಾಸದಲ್ಲೇ ಆಕೆಯನ್ನ ಬಂಧಿಸಲಾಗಿದ್ದು,  ಕೆಲ ಕಾಲ ಗಂಭೀರ ವಿಚಾರಣೆ ನಡೆಸಿ ಕೆಲ ವಿಚಾರಗಳ ಕುರಿತಂತೆ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಈ ಮಹಿಳೆ ಇಂಥದ್ದೇ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.


ನನ್ನ ಮೇಲಿನ ಅತ್ಯಾಚಾರ ಕೇಸ್`ನಲ್ಲಿ ರಾಜಕಾರಣಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೋರ್ಟ್`ನಲ್ಲಿ ಮಹಿಳೆ ದೂರು ದಾಖಲಿಸಿದ ಬಳಿಕ ಸಂಸದರು ಕಳೆದವಾರ ಪೊಲೀಸರಿಗೆ ಹನಿಟ್ರ್ಯಾಪ್ ದೂರು ನೀಡಿದ್ದರು.

ಮಾರ್ಚ್ 3ರಂದು ಅಧಿಕೃತ ನಿವಾಸಕ್ಕೆ ಆಹ್ವಾನಿಸಿದ ಕೆ.ಸಿ. ಪಟೇಲ್ ನನ್ನ ಮೇಲೆ ಅತ್ಯಾಚಾರ ನಡೆಸಿದರು. ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆದಿದೆ. ನಾನು ನನ್ನ ಭದ್ರತೆಗೆ ಸಿಡಿ ಮಾಡಿದೆ. ಬಳಿಕ ನನ್ನನ್ನ ಬೆದರಿಸುವುದನ್ನ ಸಂಸದ ನಿಲ್ಲಿಸಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಳು.

ಆದರೆ, ಸಂಸದ ಪಟೇಲ್ ವಾದವೇ ಬೇರೆ. ನನಗೆ ಮತ್ತು ಬರುವ ಔಷಧ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋಗಳನ್ನ ತೆಗೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ