ಸೈನಿಕರು ಪ್ರತಿದಿನ ಸಾಯೋದು ಮಾಮೂಲು ಅಂದ ಬಿಜೆಪಿ ಸಂಸದ

ಮಂಗಳವಾರ, 2 ಜನವರಿ 2018 (10:29 IST)
ನವದೆಹಲಿ: ಸೈನಿಕರು ಪ್ರತಿದಿನ ಸಾಯ್ತಾರೆ. ಎಲ್ಲಾ ದೇಶಗಳ ಸೈನಿಕರೂ ಹಾಗೇ. ಅದರಲ್ಲಿ ವಿಶೇಷವೇನೂ ಇಲ್ಲ ಎಂದು ಬಿಜೆಪಿ ಸಂಸದ ನೇಪಾಲ್ ಸಿಂಗ್ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಕೊನೆಗೆ ಕ್ಷಮೆ ಯಾಚಿಸಿದ್ದಾರೆ.
 

‘ಸೈನಿಕರು ಪ್ರತೀ ದಿನ ಸಾಯ್ತಾರೆ. ನಮ್ಮ ಜಗತ್ತಿನ ಯಾವುದೇ ದೇಶದಲ್ಲಾದರೂ ಈ ರೀತಿ ಸೈನಿಕರು ಸಾಯದೇ ಇರುವ ರಾಷ್ಟ್ರಗಳಿದ್ದಾವೆಯೇ? ಅವರ ಜೀವ ಉಳಿಸುವ ಯಾವುದಾದರೂ ಯಂತ್ರ ಕಂಡುಹಿಡಿದಿದ್ದಾರೆಯೇ?’ ಎಂದು ಬಿಜೆಪಿ ಸಂಸದ ಹಗುರವಾಗಿ ಮಾತನಾಡಿದ್ದರು.

ಇದು ವಿವಾದವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ ನೇಪಾಲ್ ಸಿಂಗ್ ‘ನಾನು ನಮ್ಮ ಸೈನಿಕರ ಜೀವ ಉಳಿಸುವ ಯಂತ್ರವನ್ನು ವಿಜ್ಞಾನಿಗಳು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲು ಯತ್ನಿಸಿದೆ’ ಎಂದು ವಿವಾದಕ್ಕೆ ತೇಪೆ ಹಾಕುವ ಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ