ಬಿಜೆಪಿ ಸಂಸದೆ ರೂಪಾ ಗಂಗೂಲಿ ಆಸ್ಪತ್ರೆಗೆ ದಾಖಲು

ಶನಿವಾರ, 24 ಡಿಸೆಂಬರ್ 2016 (10:56 IST)
ಬಿಜೆಪಿ ಸಂಸದೆ, ನಟಿ ಪರಿವರ್ತಿತ ರಾಜಕಾರಣಿ ರೂಪಾ ಗಂಗೂಲಿ ಶುಕ್ರವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಮೆದುಳಿನ ನರಕೋಶಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಹೇಳಲಾಗುತ್ತಿದೆ.
ಅತೀವ ತಲೆನೋವು ಮತ್ತು ದೃಷ್ಟಿಹೀನತೆ ಕಾಣಿಸಿಕೊಂಡಿದ್ದರಿಂದ ಶುಕ್ರವಾರ ಸಂಜೆ 4 ಗಂಟೆಗೆ ಅವರನ್ನು ಸಾಲ್ಟ್‌ಲೇಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಜೊಯ್‌ಪ್ರಕಾಶ್ ಮಂಜುದಾರ್ ತಿಳಿಸಿದ್ದಾರೆ. 
 
ಪ್ರಸ್ತುತ ರೂಪಾ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಅವರನ್ನು 24ಗಂಟೆ ತೀವ್ರ ನಿಗಾದಲ್ಲಿರಿಸಲಾಗಿದೆ, ಎಂದು ಅವರು ದಾಖಲಾಗಿರುವ ಆಮ್ರಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ಕಳೆದ ಮೇ ತಿಂಗಳಲ್ಲಿ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ ರೂಪಾ ತಲೆಗೆ ಬಲವಾದ ಏಟು ಬಿದ್ದಿತ್ತು. ಇದರ ಪರಿಣಾಮ ರಕ್ತ ಹೆಪ್ಪುಗಟ್ಟಿದೆ ಎಂದು ಹೇಳಲಾಗುತ್ತಿದೆ.
 
1980ರ ದಶಕದ ಮಹಾಭಾರತ ಧಾರಾವಾಹಿಯ ದ್ರೌಪದಿ ಪಾತ್ರದ ಮೂಲಕ ಪ್ರಸಿದ್ಧರಾಗಿರುವ ರೂಪಾ 2015ರಲ್ಲಿ ಬಿಜೆಪಿ ಸೇರಿದ್ದರು. ಈ ವರ್ಷ ಅವರನ್ನು ಬಿಜೆಪಿಗೆ ನಾಮನಿರ್ದೇಶನ ಮಾಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ