ಮತ್ತೆ ರಾಹುಲ್ ಗಾಂಧಿ ಜನಿವಾರ ವಿವಾದ ಕೆದಕಿದ ಬಿಜೆಪಿ
ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳೇಶ್ವರ ದೇವಾಲಯಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಬಿಜೆಪಿ ರಾಹುಲ್ ಗೋತ್ರ ಯಾವುದು? ಅವರು ಜನಿವಾರ ಧರಿಸಿದ್ದರೇ? ಎಂದು ಲೇವಡಿ ಮಾಡಿದೆ.
ಕೇಸರಿ ಭಯೋತ್ಪಾದಕರು ಎಂಬ ಪದ ಪ್ರಯೋಗಿಸಿದ್ದ ಇದೇ ರಾಹುಲ್ ಇದೀಗ ಚುನಾವಣೆ ಹಿನ್ನಲೆಯಲ್ಲಿ ಹಿಂದೂ ದೇವಾಲಯಗಳಿಗೆ ಸುತ್ತುತ್ತಿದ್ದಾರೆ. ಈಗ ಅವರು ಯಾವ ರೀತಿಯ ಜನಿವಾರ ಧರಿಸಿದ್ದಾರೋ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವ್ಯಂಗ್ಯ ಮಾಡಿದ್ದಾರೆ. ನಿನ್ನೆಯಷ್ಟೇ ಉಜ್ಜೈನಿಗೆ ರಾಹುಲ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.