ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಔಟ್ ಮಾಡಿ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಜನರು ತಮ್ಮ ಕೆಲಸಗಳನ್ನು ಬಿಟ್ಟು ಮನೆಯಲ್ಲಿಯೇ ಇರಬೇಕಾಗದೆ. ಇದರಿಂದ ಜನರಿಗೆ ಹಣದ ಸಮಸ್ಯೆ ಎದುರಾಗಲಿದೆ.
ಇದನ್ನು ಮನಗೊಂಡ ಬಿಜೆಪಿ ಉಪಾಧ್ಯಕ್ಷ ಕಿರಿಟ್ ಸೋಮಯ್ಯ, 3 ತಿಂಗಳು ಇಎಂಐ, ವೈಯಕ್ತಿಕ ಸಾಲಗಳಿಗೆ ವಿನಾಯಿತಿ ನೀಡುವಂತೆ ಆರ್ ಬಿಐಗೆ ಪತ್ರ ಬರೆಯುವುದರ ಮೂಲಕ ಮನವಿ ಮಾಡಿದ್ದಾರೆ ಎನ್ನಲಾಗಿದೆ.