ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ವಿದ್ಯುತ್ ಶಾಕ್: ರಾಹುಲ್ ಗಾಂಧಿ

ಬುಧವಾರ, 1 ನವೆಂಬರ್ 2017 (16:48 IST)
ಗುಜರಾತ್ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಾ ಸಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ವಿದ್ಯುತ್ ಶಾಕ್ ದೊರೆಯಲಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್ ರಾಜ್ಯದ ಜನತೆಗೆ ಸತ್ಯಗೊತ್ತಾಗಿದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ಸರಕಾರ, ರೈತರ, ಬಡವರ ಮತ್ತು ವ್ಯಾಪಾರಿಗಳ ಸರಕಾರವಾಗಲಿದೆಯೇ ಹೊರತು ಮೋದಿಯ ಕೈಗಾರಿಕೋದ್ಯಮಿಗಳದಲ್ಲ ಎಂದು ಗುಡುಗಿದ್ದಾರೆ. 
 
ವ್ಯವಹಾರದ ವರದಿಗಾಗಿ ಕೇಂದ್ರವನ್ನು ಗೇಲಿ ಮಾಡುತ್ತಿರುವ ಗಾಂಧಿ, ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಸಣ್ಣ-ಸಮಯದ ರೈತರು ಮತ್ತು ವ್ಯಾಪಾರಿಗಳು ಹೇಗೆ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಕೇಳಿದಾಗ, ಉನ್ನತ ಕೈಗಾರಿಕೋದ್ಯಮಿಗಳು ಲಾಭಗಳನ್ನು ಪಡೆಯುತ್ತಿದ್ದಾರೆ.
 
ಸಣ್ಣ ರೈತರು, ಮಧ್ಯಮ ವರ್ಗದ ವ್ಯಾಪಾರಿಗಳು ನೋವು ಅನುಭವಿಸುತ್ತಿರುವ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಕಾಳಜಿಯಿಲ್ಲ. ಬೃಹತ್ ಕೈಗಾರಿಕೋದ್ಯಮಿಗಳು ಲಾಭ ಪಡೆಯುತ್ತಿರುವ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ಲೇವಡಿ ಮಾಡಿದರು. 
 
ದೇಶದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿ ವಂಚಿಸಿ ವಿಜಯ್ ಮಲ್ಯ ಲಂಡನ್‌ನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಮೋದಿಯಿಂದ ಏನು ಕ್ರಮಕೈಗೊಳ್ಳಲು ಸಾಧ್ಯವಾಯಿತು ಎಂದು ತಿರುಗೇಟು ನೀಡಿದ್ದಾರೆ.
 
ದೇಶದಲ್ಲಿ 10 ಬೃಹತ್ ಉದ್ಯಮಿಗಳಿದ್ದು, ಆರೋಗ್ಯ, ಶಿಕ್ಷಣ, ವಿದ್ಯುತ್, ನೀರು, ಉತ್ಪಾದನಾ ಕ್ಷೇತ್ರಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಅಡಳಿತ ನಡೆಸುತ್ತಿದ್ದಾರೆ. ಅವರ ಹೆಸರನ್ನು ನಾನು ಹೇಳಲು ಬಯಸುವುದಿಲ್ಲ ಎಂದರು.
 
ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಭಾರತ ಮತ್ತು ಚೀನಾ ಒಂದೇ ರೀತಿಯ ಜನಸಂಖ್ಯೆಯನ್ನು ಹೊಂದಿದೆ. ಚೀನಾ ಪ್ರತಿವರ್ಷ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಆದರೆ,ಭಾರತ ಕೇವಲ 450 ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ