ಬ್ಲ್ಯಾಕ್ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ ಪಾಪಿ!
ಬುಧವಾರ, 19 ಜನವರಿ 2022 (12:50 IST)
ಮುಂಬೈ : ಅತ್ತಿಗೆ ಸ್ನಾನ ಮಾಡುವುದನ್ನು ರಹಸ್ಯವಾಗಿ ಚಿತ್ರೀಕರಿಸಿ, ಬ್ಲ್ಯಾಕ್ ಮೇಲೆ ಮಾಡುತ್ತಾ ಮೈದುನ, ಅತ್ತಿಗೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
25 ವರ್ಷದ ಆರೋಪಿಯು ತನ್ನ ಅತ್ತಿಗೆಯೊಂದಿಗೆ ಸಂಬಂಧವನ್ನು ಹೊಂದಲು ಬಯಸಿದ್ದನು. ಅತ್ತಿಗೆ ಸ್ನಾನ ಮಾಡುತ್ತಿರುವುದನ್ನು ವೀಡಿಯೋ ಮಾಡಿಕೊಂಡಿದ್ದಾನೆ. ನಂತರ ಬ್ಲ್ಯಾಕ್ಮೇಲ್ ಮಾಡಲು ವೀಡಿಯೊವನ್ನು ಬಳಸಿದ್ದಾನೆ.
ಆದರೆ ಅವಳು ತನ್ನ ಲೈಂಗಿಕಕ್ರಿಯೆಗೆ ಒಪ್ಪದೆ ಇದ್ದಾಗ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಾನೆ. ಹೀಗೆಂದು ಪರ್ಭಾನಿ ಜಿಲ್ಲೆಯ ನಿವಾಸಿಯಾದ ಆರೋಪಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಹಿಂಜೆವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ ಪ್ರಕಾರ ಈ ಘಟನೆ ಕಳೆದ ತಿಂಗಳು ನಡೆದಿದೆ. ಆದಾಗ್ಯೂ, ಮಹಿಳೆ ತನ್ನ ಮೈದುನನ ಕುರಿತಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮತ್ತೊಮ್ಮೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಈ ವಿಚಾರವಾಗಿ ಮನನೊಂದ ಮಹಿಳೆ ತನ್ನ ಪತಿಗೆ ಈ ಘಟನೆಯನ್ನು ವಿವರಿಸಿದ್ದಾಳೆ. ನಂತರ ದಂಪತಿ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ.