ತಂಗಿಯ ಮೇಲೆ ಕಣ್ಣು ಹಾಕಿದ್ದಕ್ಕೆ ಯುವಕನಿಗೆ ಇಂತಹ ಸ್ಥಿತಿ ತಂದ ಸಹೋದರ
ಸೋಮವಾರ, 25 ಜನವರಿ 2021 (10:11 IST)
ಔರಂಗಾಬಾದ್ : ಮಹಾರಾಷ್ಟ್ರದ ಔರಂಗಬಾದ್ ನಲ್ಲಿ 20 ವರ್ಷದ ಯುವಕನನ್ನು 15 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಸಂತ್ರಸ್ತ ಹಾಗೂ ಆರೋಪಿಯ ನಡುವೆ ಈ ಮೊದಲೇ ಜಗಳವಾಗಿತ್ತು. ಆದರೆ ಸಂತ್ರಸ್ತ ಇತ್ತೀಚೆಗೆ ಆರೋಪಿಯ ತಂಗಿಯ ಮೇಲೆ ಕಣ್ಣು ಹಾಕಿದ್ದ ಎಂದು ಆರೋಪಿಸಿ ಆತನನ್ನು ಚಾಕುವಿನಿಂದ ಇರಿಯಲಾಗಿದೆ. ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಗ್ಗೆ ಸಂತ್ರಸ್ತನ ತಾಯಿ ಪೊಲೀಸರಿಗೆ ದೂರು ನಿಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ರಿಮಾಂಡ್ ಹೋಮ್ ಗೆ ಕಳುಹಿಸಿದ್ದಾರೆ.