ಏಳು ಹೆಜ್ಜೆ ಹಾಕಿದವಳು ಅರ್ಧದಿಂದಲೇ ಮದುವೆ ಬೇಡವೆಂದು ಹೊರನಡೆದಳು!
ವರ ಮತ್ತು ವಧುವಿನ ಮನೆಯವರು ಎಷ್ಟೇ ಬೇಡಿಕೊಂಡರೂ ವಧುವಿನ ಮನಸ್ಸು ಕರಗಲಿಲ್ಲ. ಕೊನೆಗೆ ವರನ ಮನೆಯವರು ವಧುವಿನ ಮನೆಯವರ ಎದುರು ಧರಣಿ ನಡೆಸಿದ್ದು, ಮದುವೆಗೆ ಖರ್ಚಾದ ಹಣ ಮರಳಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಆದರೆ ಸದ್ಯಕ್ಕೆ ತನ್ನ ಬಳಿ ಹಣವಿಲ್ಲವೆಂದು ವಧುವಿನ ತಂದೆ ಹೇಳಿದ್ದಾರೆ. ಕೊನೆಗೆ ಈ ಪ್ರಕರಣ ಗ್ರಾಮದ ಮುಖಂಡರ ಎದುರಿಗೆ ಬಂದಿದೆ. ಆಗಲೂ ಹುಡುಗಿ ನನಗೆ ವರ ಇಷ್ಟವಿಲ್ಲವೆಂದು ತಿರಸ್ಕರಿಸಿದ್ದಾಳೆ.