ಅಸಭ್ಯ ಪದ ಬಳಕೆಗೆ ಬಿಜೆಪಿ-ಬಿಎಸ್‌ಪಿಯಲ್ಲಿ ಸ್ಪರ್ಧೆ ಏರ್ಪಟ್ಟಿದೆ: ಅಖಿಲೇಶ್ ಯಾದವ್

ಭಾನುವಾರ, 24 ಜುಲೈ 2016 (16:14 IST)
ಬಿಜೆಪಿ ಮುಖಂಡ ದಯಾಶಂಕರ್ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ವಿರುದ್ಧ ಹೇಳಿಕೆ ನೀಡಿದ ನಂತರ ಉಂಟಾಗಿರುವ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿ ಮತ್ತು ಬಿಎಸ್‌ಪಿ ಪಕ್ಷಗಳ ಮಧ್ಯೆ ಯಾರು ಹೆಚ್ಚು ಅಸಭ್ಯ ಪದಗಳನ್ನು ಬಳುಸುತ್ತಾರೋ ಎನ್ನುವ ಬಗ್ಗೆ ಸ್ಪರ್ಧೆ ನಡೆಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ. 
 
ದಯಾಶಂಕರ್ ಮತ್ತು ಮಾಯಾವತಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
 
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಯಾರು ಹೆಚ್ಚು ಅಸಭ್ಯ ಪದಗಳನ್ನು ಬಳಸುತ್ತಾರೋ ಎನ್ನುವ ಬಗ್ಗೆ ಎರಡು ರಾಜಕೀಯ ಪಕ್ಷಗಳಲ್ಲಿ ಪೈಪೋಟಿ ಎದುರಾಗಿದೆ ಎಂದರು.
 
ಕಳೆದ ಮೂರು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ದಯಾಶಂಕರ್ ಹೇಳಿಕೆ ತಪ್ಪಾಗಿದೆ. ಹೇಳಿಕೆಯಲ್ಲಿ ಒಂದು ಭಾಗ ಖಂಡನೀಯ ಮತ್ತೊಂದು ಭಾಗ (ಟಿಕೆಟ್‌ಗಳ ಮಾರಾಟ) ಸತ್ಯವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಬಹುಜನ ಸಮಾಜ ಪಕ್ಷದಲ್ಲಿ ಟಿಕೆಟ್ ಪಡೆಯಬೇಕಾದಲ್ಲಿ ಹಣ ಮತ್ತು ಲಂಚವನ್ನು ನೀಡಬೇಕಾಗುತ್ತದೆ ಎನ್ನುವುದು ಪ್ರತಿಯೊಬ್ಬರಿಗೆ ಗೊತ್ತಿದೆ. ಬಿಎಸ್‌ಪಿ ಪಕ್ಷದ ಮುಖಂಡರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ