ಎರಡು ರಾಜ್ಯಗಳಲ್ಲಿ ಒಂದೇ ಹಂತದ ಚುನಾವಣೆ ನಡೆಯುತ್ತಿದ್ದು ಪ್ರಧಾನಿ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸೇರಿದಂತೆ ದಿಗ್ಗಜರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದರು.
117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಕಾಂಗ್ರೆಸ್ ಕ್ಯಾ. ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಬಿಜೆಪಿ ತೊರೆದು ಆಪ್ ಸೇರಿರುವ ಸಿಕ್ಸರ್ ಸಿಧು ವರ್ಚಸ್ಸು, ಮತಗಳನ್ನು ಸಳೆಯಲು ಕೇಜ್ರಿವಾಲ್ ಬಣಕ್ಕೆ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
'ಕೈ' ಮುರಿದು, 'ಕಮಲ'ವನ್ನು ಕಿತ್ತೊಗೆದು, ದೆಹಲಿಯಂತೆ ಪಂಜಾಬ್‌ನಲ್ಲೂ ಗದ್ದುಗೆ ಏರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಆಪ್ ಭಗವಂತಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ.
ಗೋವಾ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ 250 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ 57 ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.ಕಾಂಗ್ರೆಸ್ 37 , ಎನ್ ಸಿಪಿ 16 ಮತ್ತು ಎಂಜಿಪಿ-ಜಿಎಸ್ಎಮ್-ಶಿವ ಸೇನಾ ಮೈತ್ರಿಕೂಟಗಳು 26 ಮಂದಿ, ಬಿಜೆಪಿ 36, ಆಮ್ ಆದ್ಮಿ ಪಕ್ಷ 39 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 11 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ರಾಜ್ಯಾದ್ಯಂತ 1,649 ಮತಗಟ್ಟೆಗಳಿವೆ.