ರಾಜಧಾನಿ ಗಲಭೆ : ಮೊದಲೇ ಪ್ಲಾನ್ ಆಗಿತ್ತು ಎಂದ ಕೇಂದ್ರ ಸಚಿವ

ಬುಧವಾರ, 12 ಆಗಸ್ಟ್ 2020 (22:22 IST)
ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದು, ಇದು ಪೂರ್ವ ನಿಯೋಜಿತವಾದ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಟ್ವಿಟ್ ಮಾಡಿದ್ದು, ಘಟನೆ ಕುರಿತಂತೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಪುಲಿಕೇಶಿ ನಗರ ವಿಧಾನ ಸಭಾ ಕ್ಷೇತ್ರದ, ಕೆ.ಜಿ ಹಳ್ಳಿ, ಡಿ. ಜಿ ಹಳ್ಳಿ ಹಾಗೂ ಪುಲಿಕೇಶಿ ನಗರದಲ್ಲಿ ದಾಂಧಲೆಯನ್ನು ಎಬ್ಬಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ್ದು, ಸಮಾಜದ ಸಾಮರಸ್ಯವನ್ನು ಕದಡಲು ಪ್ರಯತ್ನಿಸಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದಿದ್ದಾರೆ.

ಇನ್ನು ಕೇಸ್ ಹಾಕುವುದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿ ಅಲ್ಲ ಎಂದಿದ್ದಾರೆ.  

ಬೆಂಗಳೂರಿನ ಪುಲಕೇಶಿನಗರದ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲೆ ಹಾಗೂ ಪೊಲೀಸರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ಮಾಡಿರುವುದು ಖಂಡನೀಯ. ಇದು ಪೂರ್ವನಿಯೋಜಿತ ಆಗಿರಬಹುದು.
ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಶಾಂತಿ ಕದಡಲು ಈ ಸಂಚು ನಡೆದಿದೆ. ಇಂತಹ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಹೀಗಂತ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ