ಸಾಕಿದ ಬೆಕ್ಕು ಚಿನ್ನಾಭರಣವನ್ನು ತೆಗೆದುಕೊಂಡು ಎಸ್ಕೇಪ್ ಆದಾಗ..!

ಶುಕ್ರವಾರ, 5 ಆಗಸ್ಟ್ 2016 (10:18 IST)
ಪ್ರೀತಿಯೊಂದು ಸಾಕಿ ಸಲುಹಿದ ಬೆಕ್ಕೊಂದು ಬಂಗಾರವನ್ನು ತೆಗೆದುಕೊಂಡು ಹೋಗಿದೆ. ಹೌದು.. ಇಂಥದ್ದೊಂದು ಅಚ್ಚರಿ ಘಟನೆ ರಾಜಸ್ಥಾನದ ಬಾಡ್ಮೇರ್ನನಲ್ಲಿ ನಡೆದಿದೆ. ತಂಬಾ ಪ್ರೀತಿಯಿಂದ ಸಾಕಿದ ಬೆಕ್ಕು ಮನೆಯವರಿಗೆ ಬಿಗ್ ಶಾಕ್ ನೀಡಿವುದರ ಮೂಲಕ ಅಚ್ಚರಿ ಮೂಡಿಸಿದೆ. 

 
ಸಾಕಿದ ಬೆಕ್ಕು ಮನೆಯವರ ಬಂಗಾರ ತೆಗೆದುಕೊಂಡು ಎಲ್ಲಿಗೆ ಹೋಗಿದೆ ಅಂತ ಗೊತ್ತಾಗಿಲ್ಲ. ಬೆಕ್ಕು ಎಲ್ಲಿ ಹೋಯಿತು ಎಂದು ತಿಳಿಯದೇ ಆತಂಕದಲ್ಲಿ ಇದೀಗ ಮನೆಯವರು ಪೊಲೀಸರ ಮೊರೆ ಹೋಗಿದ್ದಾರೆ.
 
ಬಾಡ್ಮೇರ್ನ್ ಧೋರಿಮುನ್ನಾ ನಿವಾಸಿಯಾಗಿರುವ ಫೂಲ್ ರಾಮ್ಗೆ ಬೆಕ್ಕು ಎಂದರೆ ಅವರಿಗೆ ಪಂಚ ಪ್ರಾಣ.. ಅದಕ್ಕಾಗಿ ಮನೆಯಲ್ಲೇ ಸಾಕಿದ್ದರು. 
 
ನೆಚ್ಚಿನ ಬೆಕ್ಕಿಗೆ ಚಿನ್ನಾಭರಣ ಹಾಕಿ ಫೊಟೋ ತೆಗೆಸಬೇಕೆಂಬ ಆಸೆ ಅವರಿಗಿತ್ತು. ಹಾಗಾಗಿ ಬೆಕ್ಕಿಗೆ ಚಿನ್ನಾಭರಣವನ್ನು ಧರಿಸಿಯೇ ಬಿಟ್ಟರು... ಇಲ್ಲೇ ಆಗಿದ್ದು ನೋಡಿ ತಪ್ಪು, ಚಿನ್ನಾಭರಣವನ್ನು ಬೆಕ್ಕಿಗೆ ಹಾಕಿ ಬಾಡ್ಮೇರ್ನ್ ಪೇಚಿಗೆ ಸಿಲುಕ್ಕಿದ್ದಾರೆ.
 
ಇನ್ನೂ ಬೆಕ್ಕಿಗೆ ಫೊಟೋ ತೆಗೆಯಬೇಕು ಅಂತ ಎಲ್ಲಾ ಕಡೆಗೆ ಹುಡುಕಾಡಿದ್ದಾರೆ. ಮನೆಯಲ್ಲಿ, ಬೀದಿಗಳಲ್ಲಿ ಬೆಕ್ಕು ಕಾಣಿಸಿರಲಿಲ್ಲ. ಇದರಿಂದ ಸುಸ್ತಾದ ಗ್ರಾಮಸ್ಥರು, ಮನೆ ಮಂದಿ ಗಾಬರಿಯಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಚಿನ್ನಾಭರಣವನ್ನು ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ