ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್‌ಗಳಿಗೆ ಹಂಚಲು ಕೇಂದ್ರ ಸಂಚು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ. ತಮ್ಮ ರಾಜ್ಯದ ರೈತರಿಂದ ಅಕ್ಕಿಯನ್ನು ಖರೀದಿಸಲು ಕೇಂದ್ರಕ್ಕೆ 24 ಗಂಟೆಗಳ ಕಾಲ ಗಡುವು ವಿಧಿಸುತ್ತೇವೆ. ಆದರೆ ಕೇಂದ್ರದ ಬಳಿ ಹಣವಿಲ್ಲವೇ ಅಥವಾ ಆಹಾರ ಧಾನ್ಯವನ್ನು ಖರೀದಿಸಲು ಪ್ರಧಾನಿಗೆ ಮನಸ್ಸಿಲ್ಲವೇ ಎಂದು ಕಿಡಿಕಾರಿದರು.
ಬ್ಯಾಂಕ್ಗಳನ್ನು ದಿವಾಳಿಯಾಗಲು ಬಿಟ್ಟವರನ್ನು ಸರ್ಕಾರ ರಕ್ಷಿಸುತ್ತದೆ. ಲಂಡನ್ನಲ್ಲಿ ಕಾರ್ಪೊರೇಟ್ ವಂಚಕರನ್ನು ರಕ್ಷಿಸಲು 10,000 ಕೋಟಿ ರೂ. ಖರ್ಚು ಮಾಡಲಾಗಿದೆ. ನಮ್ಮ ಬಳಿ ಈ ಬಗ್ಗೆ ದಾಖಲೆಗಳಿವೆ. ಅವುಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.