ರೊಹಿಂಗ್ಯಾ ನಿರಾಶ್ರಿತರಿಂದ ಭದ್ರತೆಗೆ ಅಪಾಯವಿದೆ: ಸುಪ್ರೀಂಕೋರ್ಟ್`ಗೆ ಕೇಂದ್ರ ಅಫಿಡವಿಟ್

ಸೋಮವಾರ, 18 ಸೆಪ್ಟಂಬರ್ 2017 (14:23 IST)
ರೊಹಿಂಗ್ಯಾ ನಿರಾಶ್ರಿತರು ದೇಶದ ಭದ್ರತೆಗೆ ಬಹುದೊಡ್ಡ ತೊಡಕಾಗಿದ್ದಾರೆ. ಹಲವರು ಉಗ್ರಗಾಮಿ ಸಂಘಟನೆಗಳು ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದಾರೆಂದು ಭದ್ರತಾ ಸಂಸ್ಥೆಗಳ ಮಾಹಿತಿ ಆಧರಿಸಿ ಸುಪ್ರೀಂಕೋರ್ಟ್`ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ 16 ಪುಟಗಳ ಅಫಿಡವಿಟ್`ನಲ್ಲಿ ತಿಳಿಸಿದೆ.
 

ಮೂಲಭೂತವಾದಿಗಳಾಗಿರುವ ರೋಹಿಂಗ್ಯಾ ನಿರಾಶ್ರಿತರಿಂದ ದೇಶದಲ್ಲಿ ಬೌದ್ಧರ ಮೇಲೆ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಅಕ್ರಮ ವಲಸೆ ದಾಖಲೆಗಳ ಮೂಲಕ ದೇಶಕ್ಕೆ ನುಸುಳಿರುವ ರೋಹಿಂಗ್ಯಾ ನಿರಾಶ್ರಿತರ ಸಂಖ್ಯೆ 40000 ಸಾವಿರ ದಾಟಿದ್ದು, ಸ್ಥಳೀಯವಾಗಿ ಹಲವು ಸಮಸ್ಯೆಗಳಿಗೆ ಕಾರಣರಾಗಿದ್ದಾರೆ. ಮಾನವ ಕಳ್ಳ ಸಾಗಣೆ, ಹವಾಲದಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಻ವರನ್ನ ಭಾರತದಲ್ಲೇ ಮುಂದುವರೆಯಲು ಬಿಟ್ಟರೆ ಅಕ್ರಮ ಮತ್ತು ದೇಶದ ಭದ್ರತೆ ದೊಡ್ಡ ಕಂಟಕವಾಗಲಿದೆ ಎಮದು ಕೇಂದ್ರ ಸರ್ಕಾರ ತಿಳಿಸಿದೆ.

ರೋಹಿಂಗ್ಯಾ ಮುಸ್ಲಿಮರ ಗಡಿಪಾರು ಪ್ರಶ್ನಿಸಿ ಸುಪ್ರೀಂಕೋರ್ಟ್`ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಕೆಯಾಗಿತ್ತು. ಜೊತೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಾಯೋಗ ಸಹ ಕೇಂದ್ರಕ್ಕೆ ನೋಟಿಸ್ ಜಾರಿಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ