ಕಾವೇರಿ ವಿವಾದದ ಬಗ್ಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೊಟ್ಟ ಗುಡ್ ನ್ಯೂಸ್ ಇದು!
ಮಂಗಳವಾರ, 7 ಫೆಬ್ರವರಿ 2017 (09:41 IST)
ನವದೆಹಲಿ: ಕಾವೇರಿ ವಿವಾದ ಎಂದಿಗೂ ಮುಗಿಯದ ಕತೆಯಾಗಿ ಉಳಿದಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ಟ್ರಿಬ್ಯುನಲ್ ಸ್ಥಾಪಿಸುವ ಪ್ರಸ್ತಾಪವಿಟ್ಟಿದ್ದು, ರಾಜ್ಯಗಳಿಗೆ ಸಿಹಿ ಸುದ್ದಿ ನೀಡಿದೆ.
ಕಾವೇರಿ ಸೇರಿದಂತೆ ದೇಶದ ಎಲ್ಲಾ ಜಲ ವಿವಾದಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಒಂದೇ ರಾಷ್ಟ್ರೀಯ ನ್ಯಾಯಾಧಿಕರಣ ಸ್ಥಾಪಿಸುವ ಕುರಿತಂತೆ ರಾಜ್ಯ ಸಭೆಯಲ್ಲಿ ಪ್ರಸ್ತಾಪನೆ ಮುಂದಿಟ್ಟಿದೆ. ನಿಗದಿತ ಸಮಯದಲ್ಲೇ ನದಿ ವಿವಾದಗಳ ಬಗ್ಗೆ ತೀರ್ಪು ನೀಡಲು ಹೊಸ ಟ್ರಿಬ್ಯುನಲ್ ಸ್ಥಾಪಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೊಯೆಲ್ ತಿಳಿಸಿದ್ದಾರೆ.
ಇದೇ ವೇಳೆ ಇಂದಿನಿಂದ ಕಾವೇರಿ ವಿವಾದ ಕುರಿತ ಮೂಲ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಆರಂಭವಾಗಲಿದೆ. ಕಾವೇರಿ ನ್ಯಾಯಾಧಿಕರಣ ನೀಡಿದ್ದ ಅಂತಿಮ ಐ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೊಳಪಡಲಿದೆ. 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಮತ್ತು ಕೇರಳಕ್ಕೆ 30 ಟಿಎಂಸಿ ನೀರು ಹಂಚಿಕೆ ಮಾಡಬೇಕೆಂದು ತೀರ್ಪು ನೀಡಿತ್ತು.
ಈ ತೀರ್ಪಿನ ಬಗ್ಗೆ ತಕರಾರು ಎತ್ತಿ ಮೂರೂ ರಾಜ್ಯಗಳು ದಾವೆ ಹೂಡಿದ್ದವು. ಇದೀಗ ವಿಚಾರಣೆಗೊಳಪಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ