ಸ್ಮಾರ್ಟ್ ಸಿಟಿಯಲ್ಲಿ ಕರ್ನಾಟಕಕ್ಕೆ ಒಂದು, ತಮಿಳುನಾಡಿಗೆ ಮೂರು

ಶುಕ್ರವಾರ, 23 ಜೂನ್ 2017 (12:44 IST)
ಕೇಂದ್ರ ನಗರಾಭಿವೃದ್ಧಿ ಇಲಾಖೆ ಮತ್ತೆ 30 ಸ್ಮಾರ್ಟ್ ಸಿಟಿಗಳನ್ನ ಘೋಷಿಸಿದೆ. ಇದರಲ್ಲಿ ತಿರುವನಂತಪುರಂ ಅಗ್ರ ಸ್ಥಾನ ಪಡೆದಿದ್ದರೆ, ಜಾರ್ಖಂಡ್`ನ ಹೊಸ ರಾಜಧಾನಿ ನಯಾ ರಾಯ್ ಪುರ್ 2ನೇ ಸ್ಥಾನದಲ್ಲಿದೆ.
 

ಕರ್ನಾಟಕಕ್ಕೆ ಏಕೈಕ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದ್ದರೆ, ತಮಿಳುನಾಡಿಗೆ 3 ಸ್ಮಾರ್ಟ್ ಸಿಟಿ ನೀಡಲಾಗಿದೆ. ಕರ್ನಾಟಕದ ಬೆಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದ್ದರೆ ತಮಿಳುನಾಡಿನ ತಿರುಚಿರಾಪಳ್ಳಿ, ತೂತುಕುಡಿ, ತಿರುನಲ್ವೇಲಿಗೆ ಸ್ಮಾರ್ಟ್ ಸಿಟಿ ಭಾಗ್ಯ ಕರುಣಿಸಲಾಗಿದೆ. ರಾಜ್ಯದಿಂದ ಅತಿಹೆಚ್ಚು ಸಂಸದರನ್ನ ಗೆಲ್ಲಿಸಿಕೊಟ್ಟರೂ ರಾಜ್ಯದ ಮೇಲೆ ನರೇಂದ್ರಮೋದಿ ಕೃಪೆ ಬೀಳುತ್ತಿಲ್ಲ  ಎಂಬ ಆರೋಪ ಕೇಳಿಬರುತ್ತಿದೆ. ಜಮ್ಮು ಮತ್ತು ಶ್ರೀನಗರ ಸಹ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿವೆ. ಗುಜರಾತ್ ರಾನ ರಾಜ್ಯಕ್ಕೂ ಮೋದಿ ಕೃಪೆ ಸಿಕ್ಕಿದೆ.

ಇದು ಮೂರನೇ ಸುತ್ತಿನ ಸ್ಮಾರ್ಟ್ ಸಿಟಿ ಆಯ್ಕೆಯಾಗಿದ್ದು, ಇದುವರೆಗೆ ದೇಶಾದ್ಯಂತ 90 ನಗರಗಳನ್ನ ಆಯ್ಕೆ ಮಾಡಲಾಗಿದೆ. ಈ ಬಾರಿ 45 ನಗರಗಳು ಸ್ಮಾರ್ಟ್ ಸಿಟಿ ರೇಸ್`ನಲ್ಲಿದ್ದವು. ಇದರಲ್ಲಿ ನಗರಗಳನ್ನ ಮಾತ್ರ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ