ಯುದ್ಧಕ್ಕೆ ಸನ್ನದ್ಧ: ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಹಣಕಾಸು ಅಧಿಕಾರ ನೀಡಿದ ಕೇಂದ್ರ

ಗುರುವಾರ, 13 ಜುಲೈ 2017 (10:28 IST)
ನವದೆಹಲಿ: ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಕೂದ ನಡೆಯುತ್ತಿರುವ ಹಿನ್ನಲೆಯಲ್ಲಿ ಯುದ್ಧ ಸನ್ನದ್ಧ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 
 
46 ವಿಧದ ಮದ್ದುಗುಂಡುಗಳು ಮತ್ತು 10 ಬಗೆಯ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಸೇನೆಗೆ ಪೂರ್ಣ ಹಣಕಾಸು ಅಧಿಕಾರ ನೀಡಲಾಗಿದೆ. ಪೂರ್ಣ ಪ್ರಮಾಣದ ಶಸ್ತ್ರಾಸ್ತ್ರ ವ್ಯವಸ್ಥೆಗಾಗಿ ರೂ.40,000 ಕೋಟಿ ವೆಚ್ಚವಾಗಬಹುದು ಎನ್ನಲಾಗಿದೆ. 
 
ಸೇನೆಯಲ್ಲಿ ಮದ್ದುಗುಂಡುಗಳ ಭಾರೀ ಕೊರತೆ ಇದೆ ಎಂದು 2015ರಲ್ಲಿಯೇ ಸಿಎಜಿ ವರದಿಯಲ್ಲಿ ತಿಳಿಸಿತ್ತು. 40 ದಿನಗಳ ಯುದ್ಧಕ್ಕೆ ಸಾಕಾಗುವಷ್ಟು ಮದ್ದುಗುಂಡು ಸಂಗ್ರಹದಲ್ಲಿ ಇರಬೇಕು ಎಂಬುದು ನಿಯಮ. ಆದರೆ, ಮದ್ದುಗುಂಡುಗಳ ಭಾರೀ ಕೊರತೆಯಿಂದಾಗಿ ಈ ನಿಯಮವನ್ನು 20 ದಿನಗಳ ಮದ್ದುಗುಡುಗಳಿಗೆ ಇಳಿಸಲಾಗಿತ್ತು. ಸೇನೆಯ ಯುದ್ಧ ಸನ್ನದ್ಧತೆಯ ಸ್ಥಿತಿಯ ಬಗ್ಗೆ ಸಿಎಜಿ ಮತ್ತು ಸಂಸದೀಯ ಸಮಿತಿ ಕೂಡ ಪ್ರಶ್ನೆಗಳನ್ನು ಎತ್ತಿದ್ದವು. ಮದ್ದು ಗುಂಡು ಮತ್ತಿ ಶಸ್ತ್ರಾಸ್ತ್ರಗಳ ತ್ವರಿತ ಖರೀದಿಗೆ ವ್ಯವಸ್ಥೆ ಮಾಡಬೇಕೆಂದು ಸೇನೆ ಈ ಹಿಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಹಾಗೂ ಚೀನಾ-ಪಾಕಿಸ್ತಾನ-ಭಾರತ ನಡುವೆ ಉಂಟಾಗಿರುವ ಉದ್ವಿಗ್ನ ವಾತಾವರಣ ಹಿನ್ನಲೆಯಲ್ಲಿ ಇದೀಗ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲು ಸೇನೆಗೆ ಅಧಿಕಾರ ನೀಡಿದೆ. 
 

ವೆಬ್ದುನಿಯಾವನ್ನು ಓದಿ