ದೇಶಾದ್ಯಂತ ಗೋಹತ್ಯೆ ನಿಷೇಧ: ಗೋಹತ್ಯೆ ಮಾಡಿದರೆ 7 ವರ್ಷ ಜೈಲು

ಶುಕ್ರವಾರ, 26 ಮೇ 2017 (18:04 IST)
ಕೇಂದ್ರ ಪರಿಸರ ಇಲಾಖೆ ದೇಶಾದ್ಯಂತ ಗೋಹತ್ಯೆ ನಿಷೇಧಿಸಿ ಆದೇಶ ಹೊರಡಿಸಿದೆ. ಗೋಹತ್ಯೆ ತಡೆಗೆ ಗೋಮಾಂಸ ಮಾರಾಟಕ್ಕೂ ನಿಷೇಧ ಹೇರಿ ಆದೇಶಿಸಲಾಗಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 2017 ಜಾರಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆ ಅನ್ವಯ ಗೋವುಗಳನ್ನ ಕೇವಲ ರೈತರಿಗೆ ಮಾತ್ರ ಮಾರಬೇಕು. ಬೇರೆ ಯಾರೂ ಸಹ ಗೋವುಗಳನ್ನ ಖರೀದಿಸುವಂತಿಲ್ಲ. ಮಾರುಕಟ್ಟೆ ಸಮಿತಿಯೂ ದನ ಕರುಗಳನ್ನ ಕೃಷಿ ಉಪಯೋಗಕ್ಕೆ ಮಾತ್ರ ಮಾರುತ್ತಿರುವ ಬಗ್ಗೆ ಮುಚ್ಚಳಿಕೆ ಬರೆಸಿಕೊಳ್ಳಬೇಕು.

ಇಷ್ಟೇ ಅಲ್ಲ, ಕಸಾಯಿಖಾನೆಗೆ ಗೋವುಗಳನ್ನ ಮಾರುವಂತಿಲ್ಲ. ಧಾರ್ಮಿಕ ಆಚರಣೆ ಹೆಸರಲ್ಲಿ ಗೋವುಗಳನ್ನ ಬಲಿಕೊಡುವಂತಿಲ್ಲ. ಗೋವುಗಳನ್ನ ಖರೀದಿಸುವ ರೈತರು 6 ತಿಂಗಳು ಮಾರಾಟ ಮಾಡುವಂತಿಲ್ಲ. ಗುರುತಿನ ಚೀಟಿ ಇಲ್ಲದ ವಾಹನಗಲಲ್ಲಿ ಗೋವುಗಳನ್ನ ಸಾಗಿಸುವುದಿಲ್ಲ. ಗೋವುಗಳನ್ನ ಮಾರಾಟ ಮಾಡಿದವರು ಮತ್ತು ಖರೀದಿಸಿದವರೂ ರಸೀದಿ ಹೊಂದಿರಬೇಕು.

ಒಂದೊಮ್ಮೆ ನಿಯಮ ಮೀರಿ ಗೋಹತ್ಯೆ ಮಾಡಿದರೆ 7 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತೆ. ಜೊತೆಗೆ ಗೋವುಗಳನ್ನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸುವಂತಿಲ್ಲ. ದನಕರುಗಳ ಮಾರುಕಟ್ಟೆ ರಾಜ್ಯ ಗಡಿಯ 25 ಕಿ.ಮೀ ಒಳಗಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ