ಕೇಂದ್ರದಿಂದ ಒಂದೇ ಪುಟದ ಆದಾಯ ತೆರಿಗೆ ಸಲ್ಲಿಕೆ ನಮೂನೆ ಜಾರಿ

ಶುಕ್ರವಾರ, 31 ಮಾರ್ಚ್ 2017 (20:29 IST)
ಆದಾಯ ತೆರಿಗೆ ವಿವರ ಸಲ್ಲಿಕೆ ನಮೂನೆಯನ್ನು ಸರಳಗೊಳಿಸಿ ಒಂದೇ ಪುಟದಲ್ಲಿ ಜಾರಿಗೊಳಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ.
 
ಆದಾಯ ತೆರಿಗೆ ಸಲ್ಲಿಸುವವರು ಆಧಾರ ಸಂಖ್ಯೆ ನಮೂದಿಸುವುದು ಮತ್ತು ನೋಟು ನಿಷೇಧದ ನಂತರ 2 ಲಕ್ಷಕ್ಕೂ ಮೇಲ್ಪಟ್ಟ ಠೇವಣಿಯ ವಿವರಗಳನ್ನು ಉಲ್ಲೇಖಿಸುವುದು ಕಡ್ಡಾಯಗೊಳಿಸಿದೆ.
 
ಇಲ್ಲಿಯವರೆಗೆ ಆದಾಯ ತೆರಿಗೆ ವಿವರ ಸಲ್ಲಿಕೆ ನಮೂನೆ ಏಳು ಪುಟಗಳನ್ನು ಹೊಂದಿತ್ತು. ಇದೀಗ ಕೇವಲ ಒಂದು ಪುಟದ ಸರಳ ಐಟಿಆರ್‌ ನಮೂನೆ-1 ಸಹಜ್ ಎನ್ನುವ ಹೆಸರಲ್ಲಿ ಜಾರಿಗೆ ತಂದಿದೆ.
 
ನಮೂನೆ-1 ರಲ್ಲಿ 50 ಲಕ್ಷ ರೂಪಾಯಿ ವೇತನದ ಆದಾಯ ಹೊಂದಿರುವವರು ಆದಾಯ ತೆರಿಗೆ ಇಲಾಖೆಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
 
ಇದೀಗ ಆದಾಯ ತೆರಿಗೆ ಪಾವತಿಸುವ ಪ್ರತಿಯೊಬ್ಬರು ಆಧಾರ ಸಂಖ್ಯೆ ಮತ್ತು ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದ್ದಲ್ಲದೇ 2 ಲಕ್ಷಕ್ಕೂ ಅಧಿಕ ಹಣವನ್ನು ಠೇವಣಿ ಮಾಡಿದ್ದರೆ ಸಂಪೂರ್ಣ ವಿವರ ನೀಡುವುದು ಕಡ್ಡಾಯವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ