ಛತ್ತೀಸ್‌ಗಢ, ಒಡಿಶಾ ಗಡಿಯಲ್ಲಿ ಮತ್ತೆ ಗುಡಿನ ಮೊರೆತ: ಪೊಲೀಸ್ ಎನ್‌ಕೌಂಟರ್‌ಗೆ 14 ನಕ್ಸಲರು ಬಲಿ

Sampriya

ಮಂಗಳವಾರ, 21 ಜನವರಿ 2025 (15:02 IST)
Photo Courtesy X
ರಾಯ್‌ಪುರ್‌: ಛತ್ತೀಸ್‌ಗಢ  ಒಡಿಶಾ ಗಡಿಯಲ್ಲಿ ಛತ್ತೀಸ್‌ಗಢ  ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 14 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸುಳಿವು ನೀಡಿದರೆ ₹ 1 ಕೋಟಿ ರೂಪಾಯಿ ಬಹುಮಾನವಿದ್ದ ನಕ್ಸಲ್ ಜಯರಾಮ್ ಅಲಿಯಾಸ್ ಚಲಪತಿ ಕೂಡ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ 14ಕ್ಕೂ ಹೆಚ್ಚು ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ₹1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲೈಟ್‌ನ ಕೇಂದ್ರ ಸಮಿತಿ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಕೂಡ ಹತರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ಎಸ್‌ಎಲ್‌ಆರ್ ರೈಫಲ್‌ನಂತಹ ಸ್ವಯಂಚಾಲಿತ ಬಂದೂಕು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಗರಿಯಾಬಂದ್ ನಿಖಿಲ್ ರಾಖೇಚಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ