ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಗ್ಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ವಕ್ಷೇತ್ರದಲ್ಲೇ ಅಖಿಲೇಶ್ ಯಾದವ್ ಸೋತಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಸೋತಿರುವುದು ಸಿಎಂ ಅಖಿಲೇಶ್ ಸಿಂಗ್ ಯಾದವ್ ಅಲ್ಲ. ಅದೇ ಹೆಸರಿನ ಮೊತ್ತೊಬ್ಬ ವ್ಯಕ್ತಿ ಸೋಲನುಭವಿಸಿದ್ದಾನೆ.
ಮುಬಾರಕ್ ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಖಿಲೇಶ್ ಯಾದವ್ ಎಂಬ ವ್ಯಕ್ತಿ 600ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಎಸ್`ಪಿ ಶಾ ಅಲಮ್ ಎದುರು ಸೋಲನುಭವಿಸಿದ್ದಾರೆ. ಚುನಾವಣಾ ಆಯೋಗದ ವೆಬ್ ಸೈಟ್`ನಲ್ಲಿ ಹೆಸರು ಪ್ರಕಟವಾಗಿತ್ತು. ಇದು ಎಲ್ಲೆಡೆ ಗೊಂದಲಕ್ಕೆ ಕಾರಣವಾಗಿತ್ತು.
ಅಸಲಿಗೆ ಎಲ್`ಸಿಯಾಗಿರುವ ಸಿಎಂ ಅಖಿಲೇಶ್ ಯಾದವ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಇರಲಿಲ್ಲ.
ಅಸಲಿಗೆ ಎಲ್`ಸಿಯಾಗಿರುವ ಸಿಎಂ ಅಖಿಲೇಶ್ ಯಾದವ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಇರಲಿಲ್ಲ.