ಹೊತ್ತಿ ಉರಿದ ರೈಲಿನ ಬೋಗಿಗಳು, 5 ಸಾವು
ಬಾಂಗ್ಲಾದೇಶ-ಬಾಂಗ್ಲಾದೇಶದ ಬೆನಾಪೋಲ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಐವರು ಮೃತಪಟ್ಟಿದ್ದಾರೆ. ರೈಲಿನಲ್ಲಿ ಭಾರತೀಯ ಪ್ರಜೆಗಳೂ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈಘಟನೆಯಲ್ಲಿ ಹಲವಾರು ಗಾಯಗೊಂಡಿದ್ದಾರೆ. ರೈಲು ಜೆಸ್ಸೋರ್‌ನಿಂದ ಢಾಕಾಕ್ಕೆ ತೆರಳುತ್ತಿತ್ತು. ರೈಲು ಸಯಿದಾಬಾದ್‌ನ ಗೋಲಬಾಗ್ ಪ್ರದೇಶಕ್ಕೆ ತಲುಪಿದಾಗ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ತಗುಲಿದ ಬೆನಪೋಲ್ ಪ್ಯಾಸೆಂಜರ್ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುತ್ತಿದ್ದ ವೇಳೆ ಓರ್ವ ಯುವಕ ಮೃತಪಟ್ಟಿದ್ದಾನೆ. ಬೆನಪೋಲ್ ಎಕ್ಸ್‌ಪ್ರೆಸ್‌ನಲ್ಲಿ ಕನಿಷ್ಠ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ರಕ್ಜಿಬುಲ್ ಹಸನ್ ಹೇಳಿದ್ದಾರೆ. ಬೆಂಕಿಯ ಘಟನೆಯ ಹಿಂದೆ ದುಷ್ಕರ್ಮಿಗಳ ಕೇವಾಡವಿದೆ ಎಂದು ಅಲ್ಲಿನ ಪೊಲೀಸರು ಶಂಕಿಸಿದ್ದಾರೆ. ವಿರೋಧ ಪಕ್ಷ ಬಿಎನ್ಪಿ ಈ ಆರೋಪವನ್ನು ಅಲ್ಲಗೆಳೆದಿದೆ. ಈ ಮೂಲಕ ವಿರೋಧ ಪಕ್ಷಗಳ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಮತ್ತು ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದೆ.