ಪಕ್ಷದ ಹಿತಕ್ಕೆ ಒಗ್ಗಟ್ಟು ಮುಖ್ಯ" : ಸೋನಿಯಾ

ಶನಿವಾರ, 16 ಅಕ್ಟೋಬರ್ 2021 (14:42 IST)
ನವದೆಹಲಿ, ಅ.16 : ಮುಂದಿನ ದಿನಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಆಕ್ರಮಣಕಾರಿ ಪಕ್ಷ ಸಂಘಟನೆ ರಣತಂತ್ರ ಅನುಸರಿಸಲು ಎಐಸಿಸಿ ಕಾರ್ಯಕಾರಿ ಸಮಿತಿ ಚರ್ಚಿಸಿದೆ.

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಅಕ್ಬರ್ ರಸ್ತೆಯ 24ರಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಅಂಬಿಕಾ ಸೋನಿ, ರಾಜ್ಯಸಭೆ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್, ಹಾಲಿ ನಾಯಕ ಮಲ್ಲಿಕಾರ್ಜುನ ಖರ್ಗೆ, ಎ.ಕೆ.ಆಂಟ್ಯನಿ, ಕರ್ನಾಟಕದಿಂದ ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ದಿನೇಶ್ ಗುಂಡುರಾವ್ ಸೇರಿದಂತೆ 25ಮಂದಿ ನಾಯಕರು ಭಾಗವಹಿಸಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ಸಿಂಗ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಪಂಜಾಬ್ ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಪಕ್ಷದ ನಿರ್ಧಾರವನ್ನು ಜಿ-23 ಕೂಟ ಪ್ರಶ್ನಿಸಿದ ಬಳಿಕ ನಡೆದ ಈ ಸಭೆ ಮಹತ್ವದ್ದಾಗಿತ್ತು.ಸಭೆಯ ಆರಂಭದಲ್ಲಿ ಮಾತನಾಡಿದ ಸೋನಿಯಾಗಾಂಧಿ ಅವರು, ನನಗೆ ಪಕ್ಷದ ಮಧ್ಯಂತರ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಳ್ಳುವಂತೆ 2019ರಲ್ಲಿ ಕೇಳಿಕೊಂಡಿದ್ದ ಸತ್ಯದ ಪ್ರಜ್ಞಾಪೂರ್ವಕ ಅರಿವಿದೆ.
2021ರ ಜೂನ್ 30ರ ವೇಳೆಗೆ ಆಂತರಿಕ ಚುನಾವಣೆ ನಡೆದು ಪೂರ್ಣಕಾಲಿಕ ಅಧ್ಯಕ್ಷರ ಆಯ್ಕೆಯಾಗಬೇಕಿತ್ತು. ಆದರೆ ಕೋವಿಡ್-19ರ ಎರಡನೆ ಅಲೆಯಿಂದ ಸೋಂಕು ಹೆಚ್ಚಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಮೇ 10ರಂದು ನಡೆದ ಕಾರ್ಯಕಾರಿ ಸಭೆಯಲ್ಲಿ ನನ್ನ ಅಕಾರರಾವಯನ್ನು ವಿಸ್ತರಿಸಲಾಗಿದೆ.
ಈಗ ಎಲ್ಲರಿಗೂ ಸ್ಪಷ್ಟ ಪಡಿಸಬಯಸುತ್ತೇನೆ, ಮುಂದಿನ ಅಧ್ಯಕ್ಷರ ಆಯ್ಕೆ ಚುನಾವಣೆ ವೇಳಾ ಪಟ್ಟಿ ನಿಮ್ಮ ಮುಂದಿದೆ, ಪೂರ್ಣಕಾಲಿಕ ಅಧ್ಯಕ್ಷರಿಗೆ ಎಲ್ಲಾ ಸಹಕಾರ ನೀಡಲು ಸಿದ್ಧಳಿದ್ದೇನೆ. ಈವರೆಗೂ ನಾನೇ ಪೂರ್ಣಾವಯ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ ಎಂದು ಸ್ಪಷ್ಟ ನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ