ಜಮ್ಮು ಮತ್ತು ಕಾಶ್ಮೀರದಲ್ಲಿ 14 ಹೊಸ ಪ್ರವಾಸಿ ತಾಣಗಳ!

ಮಂಗಳವಾರ, 21 ಜೂನ್ 2016 (10:58 IST)
ಶ್ರೀನಗರ, ಪಹಲ್ಗಾಮ್, ಗುಲ್ಮಾರ್ಗ್ ಮತ್ತು ಕಾಶ್ಮೀರ ಕಣಿವೆಯ ಪ್ರವಾಸಿ ತಾಣಗಳು ವಿಶ್ವದ ಎಲ್ಲಾ ಭಾಗಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಸುಂದರ ತಾಣಗಳಿಗೆ ಭೇಟಿ ನೀಡಲು ವಿವಿಧ ಭಾಗದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಪ್ರವಾಸಿಗರ ಪ್ರವೃತ್ತಿಯನ್ನು ಅರ್ಥ ಮಾಡಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ್ ಸರಕಾರ, ರಾಜ್ಯದಲ್ಲಿ ಹೊಸ ಸ್ಥಳಗಳ ಪರಿಚಯ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುತ್ತಿದೆ. ಖಾಸಗಿ ವಾಹಿನಿಯ ವರದಿ ಪ್ರಕಾರ ಜಮ್ಮು ಮತ್ತು ಕಾಶ್ಮೀರ್ ಸರಕಾರ ರಾಜ್ಯದಲ್ಲಿ 14 ಹೊಸ ತಾಣಗಳನ್ನು ಅಭಿವೃದ್ಧಿಗೆ ಮುಂದಾಗಿದೆ ಎಂದು ತಿಳಿಸಿದೆ.
 
ಇತ್ತೀಚಿಗೆ ಸೇನೆ ತ್ಯಜಿಸಿರುವ ತೂಸಾ ಫೈರಿಂಗ್ ಮೈದಾನ ಪ್ರದೇಶ ಮತ್ತು ಉತ್ತರ ಕಾಶ್ಮೀರದ ಬಂಗಸ್ ವ್ಯಾಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸರಕಾರ ಈ ಸ್ಥಳಗಳನ್ನು ಕೇಂದ್ರೀಕರಿಸಲು ಹೊರಟಿದೆ.
 
ಈ ಎರಡು ಪ್ರವಾಸಿ ತಾಣಗಳನ್ನು ಪರಿಸರ ಸ್ನೇಹಿ ಸ್ಥಳಗಳಾಗಿ ಪರಿವರ್ತಿಸಲು ಸರಕಾರ ಶ್ರಮಿಸುತ್ತಿದ್ದು, ಈ ಸ್ಥಳಗಳನ್ನು ಪರಿಸರ ಸ್ನೀಹಿಯಾಗಿ ಪರಿವರ್ತಿಸಲು ಸ್ಥಳೀಯ ಜನರಪ ಪ್ರಮುಖ ಪಾತ್ರ ವಹಿಸಬೇಕಾಗಿರುವುದು ಅವಶ್ಯಕವಾಗಿದೆ.
 
ಮಾಧ್ಯಮಗಳ ವರದಿ ಪ್ರಕಾರ, ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಸರಕಾರ ಅನುದಾನವನ್ನು ಸಹ ನೀಡಲಿದೆ ಎಂದು ತಿಳಿಸಿದೆ.
 
ಸಿಂಥನ್, ಮಜ್ಮೂಹ್, ಆಪೆಲ್ ಟೌನ್ ಚಿನಿವುಡರ್, ದುಭಾಲ್, ಶ್ರುಂಜ್, ಮಂತಾಲೈ, ಬನಿ ಬಸೋಲಿ, ರಂಜೀತ್  ಸಾಗರ ಜಲಾಶಯ, ನೋರಿ ಚಾಂಬ್, ಏಳು ಸರೋವರ ರಾಜೌರಿ, ಬರ್ಜುಹಮಾ ಮತ್ತು ಖಾನ್ಮೊಹ್ ಪಾರ್ಕ್ ಪ್ರವಾಸಿ ಸ್ಥಳಗಳು ಶೀಘ್ರದಲ್ಲೇ ಪ್ರವಾಸಿ ನಕ್ಷೆಯಲ್ಲಿ ಸೇರಿಸಲಾಗುತ್ತಿದೆ. 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ