ಗುಜರಾತ್‌ನಲ್ಲಿ ಕೋಮುಗಲಭೆ ಹಿಂಸಾಚಾರಕ್ಕೆ ಒಬ್ಬನ ಬಲಿ

ಶನಿವಾರ, 23 ಜುಲೈ 2016 (12:49 IST)
ಗುಜರಾತ್‌ನ ಗೊಂಡಾಲ್ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
 
ನೋಂದಣಿಯಿಲ್ಲದ ಸುವಿ ಕಾರಿನಲ್ಲಿ ಬಂದ ಆರು ಮಂದಿ ಆರೋಪಿಗಳು ಚೋರ್ಡಿ ದರ್ವಾಜಾ ಬಳಿ ಬಂದು ಇಮ್ರಾನ್ ಕಟಾರಿಯಾ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ ಕೋಮುಹಿಂಸಾಚಾರ ಭುಗಿಲೆದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.   
 
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಇಮ್ರಾವ್ ಕಟಾರಿಯಾನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಇಮ್ರಾನ್ ಕಟಾರಿಯಾ ಹತ್ಯೆಯ ನಂತರ ಆಕ್ರೋಶಗೊಂಡ ಒಂದು ಸಮುದಾಯದ ನೂರಾರು ಜನರು ಹಿಂಸಾಚಾರ ಆರಂಭಿಸಿದ್ದಾರೆ. ತರಕಾರಿ ಅಂಗಡಿಯನ್ನು ಹೊಂದಿರುವ ಪಟೇಲ್ ಸಮುದಾಯದ ಸಂಜಯ್ ಭಾದಾನಿ ಮೇಲೆ ಭೀಕರಾವಿಗ ಹಲ್ಲೆ ಮಾಡಿದ್ದರಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 
 
ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರು ಸುವಿ ಕಾರನ್ನು ಪತ್ತೆ ಮಾಡಿ ಅದರಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ