ರಾಹುಲ್ ಗಾಂಧಿಯನ್ನು ‘ಪಪ್ಪು’ ಕರೆದ ಕಾಂಗ್ರೆಸ್ ನಾಯಕನಿಗೆ ಈ ಶಿಕ್ಷೆ
ಬುಧವಾರ, 14 ಜೂನ್ 2017 (10:45 IST)
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಗಳುವ ಭರದಲ್ಲಿ ‘ಪಪ್ಪು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದ ಪಕ್ಷದ ಜಿಲ್ಲಾಧ್ಯಕ್ಷರೊಬ್ಬರು ಅಮಾನತಿನ ಶಿಕ್ಷೆ ಪಡೆದಿದ್ದಾರೆ.
ಮೀರತ್ ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ಪ್ರಧಾನ್ ಅಮಾನತುಗೊಂಡವರು. ರೈತರ ಪ್ರತಿಭಟನೆ ನಡೆಯುತ್ತಿದ್ದ ಮಧ್ಯಪ್ರದೇಶದ ಮದ್ಸೂರ್ ಗೆ ಭೇಟಿಯಿತ್ತ ರಾಹುಲ್ ಗಾಂಧಿಯನ್ನು ಹೊಗಳುವಾಗ ವಿನಯ್ ಪಪ್ಪು ಎಂದು ಕರೆದಿದ್ದರು.
‘ಪಪ್ಪು ಮನಸ್ಸು ಮಾಡಿದ್ದರೆ, ಅಧಾನಿ, ಮಲ್ಯ, ಅಂಬಾನಿ ಜತೆ ಕೈ ಜೋಡಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಪಪ್ಪು ಪ್ರಧಾನಿ ಅಥವಾ ಪ್ರಭಾವಿ ಸಚಿವರಾಗಬಹುದಿತ್ತು. ಆದರೆ ಅವರು ಆ ದಾರಿಯಲ್ಲಿ ಸಾಗಲಿಲ್ಲ. ಅದೆಲ್ಲವನ್ನೂ ಬಿಟ್ಟು ಮದ್ಸೂರ್ ಗೆ ಹೋಗುವ ಮೂಲಕ ತಮ್ಮ ಜೀವನದ ದಾರಿ ಬೇರೆ ಎಂದು ತೋರಿಸಿಕೊಟ್ಟರು’ ಎಂದು ಟ್ವಿಟರ್ ನಲ್ಲಿ ‘ಹೊಗಳಿ’ದ್ದರು.
ಆದರೆ ಸಾಮಾನ್ಯವಾಗಿ ವಿರೋಧಿಗಳು ತಮಾಷೆಗಾಗಿ ಬಳಸುವ ಪದವನ್ನು ಪಕ್ಷದ ನಾಯಕನ ಮೇಲೆ ಬಳಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ತಪ್ಪಿಗೆ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗಿಸಲಾಗಿದೆ.