ಮುಂಬೈನಲ್ಲಿ ನಡೆದ ಕಾಲ್ತುಳಿತ ಮಾನವ ನಿರ್ಮಿತ ದುರಂತ. ಸುರಕ್ಷತೆಯನ್ನು ಮುನ್ನೆಚ್ಚರಿಕೆಯಾಗಿ ತೆಗೆದುಕೊಂಡಿದ್ದಲ್ಲಿ ಇಂತಹ ಹೇಯ ಘಟನೆಯನ್ನು ತಪ್ಪಿಸಬಹುದಾಗಿತ್ತು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ವೆಸ್ಟರ್ನ್ ರೈಲ್ವೆಯ ಪರೇಲ್-ಎಲ್ಫಿನ್ಸ್ಟೋನ್ ರೋಡ್ ಸ್ಟೇಷನ್ ಸಂಪರ್ಕಿಸುವ ಕಿರಿದಾದ ಫ್ಲೈಓವರ್‌ನಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಘಟನೆಯಲ್ಲಿ ಮೃತರಾದ ಮತ್ತು ಗಾಯಗೊಂಡ ಕುಟುಂಬಗಳಿಗೆ ಸೋನಿಯಾ ಸಂತಾಪ ಸೂಚಿಸಿದ್ದಾರೆ.
ದೇಶಾದ್ಯಂತ ರೈಲ್ವೆ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು , ಸುರಕ್ಷತಾ ಸಮಸ್ಯೆಗಳಿಗೆ ಸರಿಯಾದ ಯೋಜನೆ, ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಇಂತಹ ಅಪಘಾತಗಳನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಮೃತಪಟ್ಟ ಕುಟುಂಬಗಳಿಗೆ ನೆರವು ಒದಗಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.