ಕಾಂಗ್ರೆಸ್ ನ ಐತಿಹಾಸಿಕ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆ ಪುನರಾರಂಭ

ಸೋಮವಾರ, 12 ಜೂನ್ 2017 (16:29 IST)
ಬೆಂಗಳೂರು: ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಆರಂಭಿಸಿದ್ದ ಐತಿಹಾಸಿಕ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಮರುಚಾಲನೆ ನೀಡಿದರು.
 
ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಸಭಾಂಗಣದಲ್ಲಿ ಪಕ್ಷದ ಮುಖವಾಣಿಯಾದ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಸ್ಮರಣ ಸಂಚಿಕೆಯನ್ನು ರಾಹುಲ್ ಗಾಂಧಿ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬಿಡುಗಡೆಗೊಳಿಸಿದ್ದು, ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಲವಂತವಾಗಿ ಜನರ ಬಾಯಿ ಮುಚ್ಚಿಸುತ್ತಿದೆ ಎಂದರು.

ದೇಶದಲ್ಲಿ ರೈತರಿಗೆ, ದಲಿತರಿಗೆ ಹಾಗೂ ಪತ್ರಕರ್ತರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ದೇಶದಲ್ಲಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ರಾಜಕೀಯ ಕಾರಣಗಳಿಂದಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿಂತು ಹೋಗಿತ್ತು. ಈಗ ಮತ್ತೆ ಆರಂಭವಾಗಿದೆ. ಪತ್ರಿಕೆ ಪುನರಾರಂಭಗೊಳ್ಳುವ ಮೂಲಕ ದೇಶಕ್ಕೆ ಸ್ಫೂರ್ತಿ ತುಂಬುತ್ತೆ ಎಂದು ಹೇಳಿದರು. 
 
 

ವೆಬ್ದುನಿಯಾವನ್ನು ಓದಿ