ಜಿಎಸ್`ಟಿ ಎಫೆಕ್ಟ್: ಅಡುಗೆ ಅನಿಲದ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ

ಸೋಮವಾರ, 3 ಜುಲೈ 2017 (13:19 IST)
ಜಿಎಸ್`ಟಿ ಜಾರಿ ಬಳಿಕ ಇಂದೊಂದೇ ಬಿಸಿ ದೇಶದ ಜನರಿಗೆ ತಟ್ಟಲಾರಂಭಿಸಿದೆ. ದಿನಬಳಕೆಯ ಅಡುಗೆ ಅನಿಲದ ಮೇಲೂ ದೊಡ್ಡ ಪರಿಣಾಮ ಬೀರುತ್ತಿದೆ.  ಪ್ರತೀ ಸಿಲಿಂಡರ್ ಬೆಲೆಯಲ್ಲಿ 32 ರೂ. ಏರಿಕೆಯಾಗುವ ಸಾಧ್ಯತೆ ಇದೆ.

ಜಿಎಸ್`ಟಿ ಏರಿಕೆ ಮತ್ತು ಸಬ್ಸಿಡಿ ಕಡಿತದ ಪರಿಣಾಮ ಒಟ್ಟೊಟ್ಟಿಗೆ ಗ್ರಾಹಕರ ಮೇಲೆ ಬೀರುತ್ತಿದ್ದು, ಅಡುಗೆ ಅನಿಲದ ಬೆಲೆ ಒಟ್ಟು 32 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ. ಶೇ.18ರಷ್ಟು ಜಿಎಸ್`ಟಿ ಹೇರಲಾಗಿದ್ದು, ಇದರಿಂದ 12-15 ರೂ. ಬೆಲೆ ಏರಿಕೆ ಆಗಲಿದೆ. ಅಡುಗೆ ಅನಿಲದ ಸಬ್ಸಿಡಿ ಸಹ 119ರಿಂದ 107 ರೂ.ಗೆ ಇಳಿಸಲಾಗಿದೆ. ಹೀಗಾಗಿ, ಅಡುಗೆ ಅನಿಲದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.  

ಕಮರ್ಷಿಯಲ್ ಎಲ್`ಪಿಜಿ ಮೇಲಿನ ಜಿಎಸ್`ಟಿ 14.5ಕ್ಕೆ ಇಳಿಸಲಾಗಿದ್ದು, ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 69 ರೂ. ಇಳಿಕೆಯಾಗಲಿದೆ. ಈ ಹಿಂದೆ ಒಟ್ಟು 22.5 ತೆರಿಗೆ ಕಮರ್ಷಿಯಲ್ ಸಿಲಿಂಡರ್ ಮೇಲಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ