ಇನ್ನು ಗರ್ಭಿಣಿಯರಿಗೂ ಸಿಗುತ್ತೆ ಕೊರೋನಾ ಲಸಿಕೆ

ಬುಧವಾರ, 30 ಜೂನ್ 2021 (10:08 IST)
ನವದೆಹಲಿ: ಇಷ್ಟು ದಿನ ಗರ್ಭಿಣಿ ಸ್ತ್ರೀಯರಿಗೆ ಕೊರೋನಾ ಲಸಿಕೆ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಗರ್ಭಿಣಿಯರೂ ಲಸಿಕೆ ತೆಗೆದುಕೊಳ್ಳಬಹುದು.


ಈ ಬಗ್ಗೆ ಕೇಂದ್ರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಗರ್ಭಿಣಿಯರ ಮೇಲೆ ಲಸಿಕೆ ಅಪಾಯ ಹೆಚ್ಚಿಸುವುದಿಲ್ಲ ಎಂದಿದೆ. ತಮ್ಮ ಜೊತೆಗೆ ಹೊಟ್ಟೆಯಲ್ಲಿರುವ ಮಗುವನ್ನು ಕೊರೋನಾದಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆದುಕೊಳ್ಳಬಹುದು ಎಂದಿದೆ.

ಎಲ್ಲಾ ಗರ್ಭಿಣಿಯರೂ ಕೊವಿನ್‍ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ಅಥವಾ ಲಸಿಕಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಕೇಂದ್ರ ಹೇಳಿದೆ. ಆದರೆ ಲಸಿಕೆ ಹಾಕಿಸಿಕೊಳ್ಳುವ ಮೊದಲು ಆ ಕುರಿತಂತೆ ಆಪ್ತ ಸಮಾಲೋಚನೆ, ವೈದ್ಯರ ಸೂಕ್ತ ಮಾರ್ಗದರ್ಶನ ಪಡೆಯುವುದು ಸೂಕ್ತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ