ಭಾರತದಲ್ಲಿ ಕೊರೊನಾ ವೈರಸ್ ಮೂರನೇ ಹಂತ ತಲುಪಿಲ್ಲ; ತಪ್ಪು ಒಪ್ಪಿಕೊಂಡ ಡಬ್ಲೂ ಹೆಚ್ ಓ

ಶನಿವಾರ, 11 ಏಪ್ರಿಲ್ 2020 (09:53 IST)

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣ(ಮೂರನೇ ಹಂತ) ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
 


 

ವಿಶ್ವ ಆರೋಗ್ಯ ಸಂಸ್ಥೆ ಯಥಾಸ್ಥಿತಿ ವರದಿಯಲ್ಲಿ , ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ಹೋಗಿದೆ ಎಂದು ಹೇಳಿತ್ತು. ಆದರೆ ಈಗ ತನ್ನ ತಪ್ಪನ್ನು ಒಪ್ಪಿಕೊಂಡ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಸೋಂಕು ಹರಡುವ ಕ್ಲಸ್ಟರ್  ಕಾಣಿಸಿಕೊಂಡಿವೆ. ಆದರೆ ಸಮುದಾಯ ಪ್ರಸರಣ(ಮೂರನೇ ಹಂತ) ಸ್ಥಿತಿ ಉಂಟಾಗಿಲ್ಲ ಎಂದು ಹೇಳಿದೆ.

 

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಸಚಿವಾಲಯ, ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣ(ಮೂರನೇ ಹಂತ) ತಲುಪಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ, ಎಚ್ಚರಿಕೆಯಿಂದಿರಿ ಎಂದು ಹೇಳಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ