ಆಸ್ಪತ್ರೆ ಬಿಲ್ ಕಟ್ಟಲು ನವಜಾತ ಶಿಶುವನ್ನೇ ಮಾರಿದ ದಂಪತಿ

ಬುಧವಾರ, 2 ಸೆಪ್ಟಂಬರ್ 2020 (12:10 IST)
ನವದೆಹಲಿ: ಹೆರಿಗೆ ಬಳಿಕ ಆಸ್ಪತ್ರೆ ಬಿಲ್ ಕಟ್ಟಲು ದುಡ್ಡಿಲ್ಲವೆಂದು ದಂಪತಿ ನವಜಾತ ಶಿಶುವನ್ನೇ ಆಸ್ಪತ್ರೆಯವರಿಗೆ ಮಾರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 

ಆದರೆ ಇದನ್ನು ನಿರಾಕರಿಸಿರುವ ಆಸ್ಪತ್ರೆ ಮೂಲಗಳು, ದಂಪತಿ ತಮಗೆ ಮಗುವನ್ನು ದತ್ತು ನೀಡಿರುವುದಾಗಿ ಹೇಳಿವೆ. ಮಹಿಳೆಗೆ ಕಳೆದ ವಾರ ಸಿಸೇರಿಯನ್ ಹೆರಿಗೆಯಾಗಿತ್ತು. ಡಿಸ್ಚಾರ್ಜ್ ಆಗಬೇಕೆಂದಾಗ ಆಸ್ಪತ್ರೆ ಬಿಲ್ 30 ಸಾವಿರ ಮತ್ತು ಔಷಧಗಳಿಗೆ 5000 ರೂ. ವೆಚ್ಚ ಭರಿಸಬೇಕೆಂದು ಆಸ್ಪತ್ರೆ ಹೇಳಿದೆ. ಇದನ್ನು ಭರಿಸಲಾಗದ ದಂಪತಿ ಮಗುವನ್ನೇ 1 ಲಕ್ಷ ರೂ.ಗಳಿಗೆ ಮಾರಿದ್ದಾರೆ. ಈ ಕುರಿತಂತೆ ಆಸ್ಪತ್ರೆ ಅನಕ್ಷರಸ್ಥ ದಂಪತಿಯಿಂದ ದಾಖಲೆಗಳಿಗೆ ಹೆಬ್ಬೆಟ್ಟಿನ ಸಹಿಯನ್ನೂ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ