ಗೋವುಗಳ ಮಾರಾಟ, ಸರಬರಾಜು ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ

ಮಂಗಳವಾರ, 11 ಜುಲೈ 2017 (12:56 IST)
ಕೇಂದ್ರ ಸರ್ಕಾರದ ಗೋಹತ್ಯೆ, ಗೋವುಗಳ ಸರಬರಾಜು ನಿಷೇಧ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೇಂದ್ರದ ನಿರ್ಧಾರದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಖೇಹರ್ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಜನರ ಜೀವನಾಧಾರಗಳನ್ನ ಅನಿಶ್ಚಿತತೆಗೆ ಒಳಪಡಿಸಲಾಗುವುದಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿದೆ.

 
ಸುಪ್ರೀಂಕೋರ್ಟ್ ಅಸಮಾಧಾನಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಗೋವುಗಳ ಮಾರಾಟ ಮತ್ತು ಸರಬರಾಜು ಕುರಿತು ಕೆಲ ತಿದ್ದುಪಡಿಗಳನ್ನ ಮಾಡಿ ಆಗಸ್ಟ್`ನಲ್ಲಿ ಮರು ಅಧಿಸೂಚಬೆ ಹೊರಡಿಸುವುದಾಗಿ ಹೇಳಿದೆ. ಈ ಅಧಿಸೂಚನೆ ಬಗ್ಗೆ ರಾಜ್ಯಗಳು ಎತ್ತಿರುವ ಆಕ್ಷೇಪಣೆಗಳನ್ನ ಹೊಸ ಅಧಿಸೂಚನೆ ವೇಲೆ ಪರಿಗಣಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.

ಇತ್ತೀಚೆಗೆ, ಕೇಂದ್ರ ಸರ್ಕಾರ ಗೋಹತ್ಯೆ ಮತ್ತು ಗೋವುಗಳ ಸರಬರಾಜನ್ನ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಕೃಷಿ ಉಪಯೋಗ ಮತ್ತು ಹಾಲಿಗಾಗಿ ಸಾಕಾಣಿಕೆಗೆ ಮಾತ್ರ ಹಸುಗಳನ್ನ ಮಾರಾಟ ಮಾಡಬೇಕು. ವ್ಯವಹಾರದ ದಾಖಲೆ ಇಟ್ಟಿರಬೇಕು. ಅಕ್ರಮ ಸಾಗಾಟಕ್ಕೆ ಜೈಲುಶಿಕ್ಷೆಯಂತಹ ಕಠಿಣ ಕಾನೂನು ಇದರಲ್ಲಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ