ಅತ್ತೆಯ ಗೀಳು ಮನೋರೋಗ ತಡೆಯಲಾರದೆ ಸೊಸೆ ಮಾಡಿದ್ದೇನು ಗೊತ್ತಾ?

ಬುಧವಾರ, 4 ನವೆಂಬರ್ 2020 (10:54 IST)
ಅಹಮ್ಮದಾಬಾದ್: ಅತ್ತೆಯ ಗೀಳು ಮನೋರೋಗದ ಹುಚ್ಚು ತಡೆಯಲಾರದೇ ಸೊಸೆಯೊಬ್ಬಳು ಆಕೆಯ ಪ್ರಾಣವನ್ನೇ ತೆಗೆದ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಪದೇ ಪದೇ ಮಾಡಿದ ಕೆಲಸವನ್ನೇ ಮಾಡುವ ಗೀಳು ಮನೋರೋಗ ಹೊಂದಿದ್ದ ಅತ್ತೆ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ, ಕಾಲಿಟ್ಟರೂ ಸ್ನಾನ ಮಾಡಿ ಬಾ ಎಂದೆಲ್ಲಾ ಸೊಸೆಗೆ ಕಾಟ ಕೊಡುತ್ತಿದ್ದಳು. ಇದರಿಂದ ಬೇಸತ್ತ ಸೊಸೆ ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾಳೆ. ವಿಪರ್ಯಾಸವೆಂದರೆ ಸೊಸೆ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಇದೀಗ ಆರೋಪಿ ಸೊಸೆಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ