ಮಗಳ ಲೈಂಗಿಕ ದೌರ್ಜನ್ಯ: ತಂದೆ ಮಾಡಿದ್ದಾದ್ರು ಏನು?

ಸೋಮವಾರ, 25 ಅಕ್ಟೋಬರ್ 2021 (18:00 IST)
ಕೇರಳ : ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ವೃದ್ಧನೊಬ್ಬ ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಇದರಿಂದ ಮನನೊಂದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಟ್ಟಾಯಂನ ಕುರಿಚಿಯಲ್ಲಿ ನಡೆದಿದೆ.
ಬಾಲಕಿ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ ಗ್ರಾಮದ ಕೆಲವು ಜನರು ಆತನನ್ನು ದೂರ ಇರಿಸಿದ್ದರು. ಅಲ್ಲದೇ ಈ ಪ್ರಕರಣವನ್ನು ಮುಚ್ಚಿಹಾಕಲು ಬಾಲಕಿ ತಂದೆ ಆರೋಪಿಯಿಂದ ಹಣ ತೆಗೆದುಕೊಂಡಿದ್ದಾನೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
74 ವರ್ಷದ ಯೋಗಿ ದಾಸ್ ಎಂಬ ವೃದ್ಧ ಅಂಗಡಿಗೆ ಕಿರಾಣಿ ವಸ್ತುಗಳನ್ನು ಖರೀದಿಸಲು ಬಾಲಕಿ ಬಂದಾಗ ಈ ಕೃತ್ಯವೆಸಗಿದ್ದಾನೆ. ಪೊಕ್ಸೊ ಪ್ರಕರಣದಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ