ತಂದೆಗೆ ಕಂಠಪೂರ್ತಿ ಕುಡಿಸಿ ಬೆಂಕಿ ಹಚ್ಚಿದ ಮಗಳು

ಬುಧವಾರ, 24 ಮಾರ್ಚ್ 2021 (10:12 IST)
ಕೋಲ್ಕೊತ್ತಾ: ತಂದೆಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ ಮಗಳು ಬಳಿಕ ಆತನ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆ ಮಾಡಿದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.


56 ವರ್ಷದ ವ್ಯಕ್ತಿ ಹತ್ಯೆಗೀಡಾದವರು. 22 ವರ್ಷದ ವಿಚ್ಛೇದಿತ ಮಗಳು ಈ ಕೃತ್ಯವೆಸಗಿದ್ದಾಳೆ. ತನ್ನ ತಂದೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಅದಕ್ಕೇ ಈ ಕೆಲಸ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾಳೆ.

ಪಾನಪ್ರಿಯನಾಗಿದ್ದ ತಂದೆಯನ್ನು ಸ್ನೇಹಿತರ ಪಾರ್ಟಿಯಿದೆ ಎಂದು ಸುಳ್ಳು ಹೇಳಿ ಹೊರಗೆ ಕರೆದೊಯ್ದಿದ್ದ ಆರೋಪಿ ಮಗಳು ರೆಸ್ಟಾರೆಂಟ್ ಒಂದರಲ್ಲಿ ಊಟ ಕೊಡಿಸಿ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅಲ್ಲಿ ಕಂಠಪೂರ್ತಿ ಮದ್ಯ ಕುಡಿಸಿ ತಂದೆ ನಿದ್ರಾವಸ್ಥೆಯಲ್ಲಿದ್ದಾಗ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ