ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಇದೆ ಎಂದು ಆ್ಯಸಿಡ್ ಸುರಿದು ಕೊಲೆ!
ಉತ್ತರ ಪ್ರದೇಶದ ಕೌಶಂಬಿಯ ಟೆನ್ ಷಾ ಅಲಮಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರೇಶ್ ಹಾಗೂ ಆತನ ಪತ್ನಿ ಶೋಭಾದೇವಿ ಸೇರಿ ತಮ್ಮ 21 ವರ್ಷದ ಮಗಳ ಮೇಲೆ ಆ್ಯಸಿಡ್ ಸುರಿದು ಕೊಲೆ ಮಾಡಿದ್ದಾರೆ. ಈ ಕೊಲೆಗೆ ಸಂಬಂಧಿಕರಿಬ್ಬರ ಸಹಾಯ ಪಡೆದಿದ್ದಾರೆ.
ಅದಾದ ಬಳಿಕ ತಮ್ಮ ಮಗಳು ಕಾಣೆ ಆಗಿದ್ದಾಳೆ ಎಂದು ನರೇಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಘಟನೆಗೆ ಸಂಬಂಧಿಸಿ ಪ್ರಕರಣ ಕೈಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಗ್ರಾಮದ ಹೊರಗಿನ ಕಾಲುವೆಯಿಂದ ವಿರೂಪಗೊಂಡ ಮೃತದೇಹವನ್ನು ಹೊರತೆಗೆಯಲಾಗಿದೆ.